ಮುಂಬೈಯಲ್ಲಿ ಜ.7ರವರೆಗೆ ನಿಷೇಧಾಜ್ಞೆ: ಹೊಸ ವರ್ಷಾಚರಣೆಗೆ ನಿಷೇಧ

0
255

ಸನ್ಮಾರ್ಗ ವಾರ್ತೆ

ಮುಂಬೈ: ಕೊರೋನ ಹರಡುವುದು ತೀವ್ರಗೊಂಡ ಹಿನ್ನೆಲೆಯಲ್ಲಿ ಮುಂಬೈ ನಗರದಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಇಂದಿನಿಂದ ಜನವರಿ ಏಳವರೆಗೆ ಈ ಸೆಕ್ಷನ್ ಮುಂದುವರಿಯುತ್ತದೆ. ರೆಸ್ಟಾರೆಂಟ್, ಹೊಟೇಲು, ಬಾರ್, ಪಬ್‍ಗಳು, ರಿಸಾರ್ಟ್‍ಗಳು , ಕ್ಲಬ್‍ಗಳಲ್ಲಿ ಬಂದ್ ಮಾಡಿ ತೆರೆದ ಸ್ಥಿತಿಯಲ್ಲಿ ಹೊಸವರ್ಷ ಆಚರಿಸುವುದಕ್ಕೆ ನಿಷೇಧ ಹೇರಲಾಗಿದೆ.

ಆದೇಶ ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆ 188 ಕಲಂ ಪ್ರಕಾರ ಎಪಿಡೆಮಿಕ್ ಡೀಸಿಸ್ ಆಕ್ಟ್1897, ರಾಷ್ಟ್ರೀಯ ವಿಪತ್ತು ನಿರ್ವಹಣೆ ಕಾನೂನು 2006 ಪ್ರಕಾರ ಪ್ರಕರಣ ದಾಖಲಿಸಲಾಗವುದು ಎಂದು ಡೆಪ್ಯುಟಿ ಕಮಿಶನರ್ ಎಸ್. ಚೈತನ್ಯ ತಿಳಿಸಿದರು.

ಕಳೆದ ದಿನ 3900 ಕೊರೋನ ಪ್ರಕರಣ ಮಹಾರಾಷ್ಟ್ರದಲ್ಲಿ ವರದಿಯಾಗಿದೆ. ಇದರಲ್ಲಿ 2,510 ಪ್ರಕರಣಗಳು ಮುಂಬೈಯದ್ದಾಗಿದೆ. ಈಗ 8,060 ಸಕ್ರಿಯ ಪ್ರಕರಣಗಳು ನಗರದಲ್ಲಿವೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ 85 ಒಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ. 24 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಇಪ್ಪತ್ತು ಮಂದಿ ಕೊರೋನಕ್ಕೆ ಬಲಿಯಾಗಿದ್ದಾರೆ