ನಮಾಝ್ ಮಾಡಲಿ ಆದರೆ ಅದು ಶಕ್ತಿ ಪ್ರದರ್ಶನವಾಗಬಾರದು: ಹರಿಯಾಣ ಸಿಎಂ ಮನೋಹರಲಾಲ್ ಕಟ್ಟರ್

0
331

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ನಮಾಝ್ ಶಕ್ತಿ ಪ್ರದರ್ಶನಕ್ಕೆ ಅವಕಾಶವೆಂದು ನೋಡಬೇಡಿ ಎಂದು ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್ ಕಟ್ಟರ್ ಹೇಳಿದ್ದು ಗುರ್ಗಾವ್ ನಲ್ಲಿ ನೀಡಲಾದ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ಜುಮುಃ ನಮಾಝ್ ತಡೆಯುವ ಹಿಂದುತ್ವವಾದಿಗಳ ಯತ್ನದ ನಡುವೆ ಕಟ್ಟರ್ ನಮಾಝ್ ಕುರಿತು ಹೇಳಿಕೆ ನೀಡಿದ್ದಾರೆ.

ಭಾರತದ ವಿಮನ್ಸ್ ಪ್ರೆಸ್ ಕಾನ್ಫರೆನ್ಸ್ ಸದಸ್ಯರೊದಿಗೆ ಸಂವಾದದದ ವೇಳೆ ಮುಖ್ಯಮಂತ್ರಿಯ ಹಿಂದುತ್ವ ಪರ ಹೇಳಿಕೆ ಬಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರಾರ್ಥನೆ ನಡೆಸುವುದು ಅನುಚಿತವಾಗಿದೆ. ನಮಾಝ್ ಮಾಡಬೇಕು. ಆದರೆ ಅದು ಶಕ್ತಿ ಪ್ರದರ್ಶನವಾಗಬಾರದು. ಎಲ್ಲ ಜನರಿಗೂ ಆರಾಧನೆಯ , ಪ್ರಾರ್ಥನೆಯ ಸ್ವಾತಂತ್ರ್ಯ ಇದ್ದರೂ ಅವು ನಿರ್ದಿಷ್ಟ ಸ್ಥಳಗಳಲ್ಲಿ ಆಗಿರಬೇಕೆಂದು ಹೇಳಿದರು.

ಇದರಲ್ಲಿ ಏನಾದರೂ ಅಭಿಪ್ರಾಯ ವ್ಯತ್ಯಾಸ ಇದ್ದರೆ ವಿವಿಧ ಧರ್ಮದ ಜನರು ಪ್ರಾದೇಶಿಕ ಅಳಿತವನ್ನು ಸಮೀಪಸಬಹುದು ಎಂದು ಅವರು ಹೇಳಿದರು. ಪಟೌಡಿಯಲ್ಲಿ ಕೆಲವು ಬಲಪಂಥೀಯ ಯುವಕರು ಕ್ರಿಸ್ಮಸ್ ಆಚರಣೆ ತಡೆದ ಘಟನೆಯ ಕುರಿತ ಪ್ರಶ್ನೆಗೆ ಇದು ದುರದೃಷ್ಟಕರ ಘಟನೆಯಾಗಿದೆ. ಇಂತಹ ಘಟನೆಗಳನ್ನು ಬೆಂಬಲಿಸಲಾಗದು. ಅಂತಹ ಯಾವ ಕಾರ್ಯಕ್ರಮ ತಡೆಯಲ್ಪಡುದುವುದು ಸರಿಯಲ್ಲ ಎಂದು ಉತ್ತರಿಸಿದರು.