ಕಳೆದ ವರ್ಷ 40,000 ಕೋಟಿ ರೂಪಾಯಿ ಜಿಎಸ್‍ಟಿ ವಂಚನೆ

0
406

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ಕಳೆದ ವರ್ಷ ತೆರಿಗೆ ಅಧಿಕಾರಿಗಳು 40,000 ಕೋಟಿ ರೂಪಾಯಿ ತೆರಿಗೆ ವಂಚನೆಯನ್ನು ಪತ್ತೆ ಹಚ್ಚಿದ್ದಾರೆ. ನಕಲಿ ಇನ್‍ವಾಯಿಸ್, ಇನ್‍ಪುಟ್ ಟ್ಯಾಕ್ಸ್ ಕ್ರೆಡಿಟ್ ಕ್ಲೇಮ್‍ಗಳನ್ನು ಉಪಯೋಗಿಸಿ ಜಿಎಸ್‍ಟಿಯಲ್ಲಿ ವ್ಯಾಪಕ ವಂಚನೆ ಸಂಬಂಧಿಸಿ 5,700 ಪ್ರಕರಣಗಳಲ್ಲಿ ಕೇಸು ದಾಖಲಿಸಿಕೊಳ್ಳಲಾಗಿದೆ. 40,000 ಕೋಟಿಯ ವಂಚನೆ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ತೆರಿಗೆ ಇಲಾಖೆ ನಿದೇರ್ಶಕರು ಮತ್ತು ಜಿಎಸ್‍ಟಿ ಇಂಟಲಿಜೆನ್ಸ್ ಖಾತೆ ಜಂಟಿಯಾಗಿ ದೇಶದ ಈಸ್ ಆಫ್ ಡುಯಿಂಗ್‍ ಪರಿಸ್ಥಿತಿಯಲ್ಲಿ ಎಚ್ಚರಿಕೆಯಿಂದ ಈ ದಾಳಿ ಮಾಡಿತ್ತು ಎಂದು ಇಕಾನಮಿಕ್ಸ್ ಟೈಮ್ಸ್‌ಗೆ ಅಧಿಕಾರಿಗಳು ತಿಳಿಸಿದರು.

ಕಳೆದ ವರ್ಷ ತೆರಿಗೆ ಸಂಪ್ರದಾಯದ ವಂಚನೆಗಳು ಪತ್ತೆಯಾದವು. ಕಾರ್ಯಾಚರಣೆ ಆರಂಭಿಸಿದ ತೆರಿಗೆ ಇಲಾಖೆ ತೆರಿಗೆ ವಂಚಕರನ್ನು ಕಂಡು ಹುಡುಕಿತು ಇದಲ್ಲದೆ ಜಿಎಸ್‍ಟಿ ಆಕ್ಟ್ 2017ರಲ್ಲಿ ಕೇಂದ್ರ ಸರಕಾರ ತಿದ್ದುಪಡಿ ತಂದಿತ್ತು. ಜನವರಿ ಒಂದಿರಂದ ಹೊಸ ಬದಲಾವಣೆಗಳು ಅಸ್ತಿತ್ವಕ್ಕೆ ಬರಲಿದೆ.