‘ಮಂಗಳೂರು ಅಲ್ಟ್ರಾಟೆಕ್ ಪ್ರಶಸ್ತಿ’ಗೆ ಆಯ್ಕೆಯಾದ ಮೊಹ್ತಿಶಾಮ್ ಸಂಸ್ಥೆಯ ‘ಕ್ಯಾನೋಪಿ ಯೋಜನೆ’

0
279

ಸನ್ಮಾರ್ಗ ವಾರ್ತೆ

ಮಂಗಳೂರು: ನಗರದ ಪ್ರಖ್ಯಾತ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಮೊಹ್ತಿಶಾಮ್ ಕಾಂಪ್ಲೆಕ್ಲಸ್ ನ ಯೋಜನೆಯಾದ ”ಕ್ಯಾನೋಪಿ ಯೋಜನೆ”ಯು ಪ್ರತಿಷ್ಠಿತ ಎಸಿಸಿಇ ಮಂಗಳೂರು ಅಲ್ಟ್ರಾಟೆಕ್ ಅವಾರ್ಡ್-2021 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ನಗರದ ಉರ್ವ ಸ್ಟೋರ್‌ನಲ್ಲಿರುವ ಮೊಹ್ತಿಶಾಮ್ ಸಂಸ್ಥೆಯ ‘ಕ್ಯಾನೋಪಿ’ ವಿಲಾಸಿ ವಸತಿ ಯೋಜನೆಗೆ ‘ದ.ಕ., ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಶ್ರೇಷ್ಠ ಕಾಂಕ್ರಿಟ್ ರಚನೆ (ಬಹು ಅಂತಸ್ತು)’ ಪ್ರಶಸ್ತಿ ಲಭಿಸಿದೆ.

2022 ರ ಜ.11ರಂದು ಸಂಜೆ 5:30ಕ್ಕೆ ಮಂಗಳೂರಿನ ಸೈಂಟ್ ಮಿಲಾಗ್ರಿಸ್ ಚರ್ಚ್ ಹಾಲ್‌ನಲ್ಲಿ ನಡೆಯಲಿರುವ ‘ಅವಾರ್ಡ್ ನೈಟ್’ ಕಾರ್ಯಕ್ರಮದಲ್ಲಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಸಂಸ್ಥೆಯು ಪ್ರಶಸ್ತಿಯನ್ನು ವಿತರಿಸಲಿದೆ.

1990ರಲ್ಲಿ ತನ್ನ ಕಾರ್ಯಾಚರಣೆ ಪ್ರಾರಂಭಿಸಿದ ಮೊಹ್ತಿಶಾಮ್ ಕಾಂಪ್ಲೆಕ್ಸಸ್ ಪ್ರೈವೇಟ್ ಲಿ. ನಗರದ ಅತ್ಯಂತ ಯಶಸ್ವೀ ಹಾಗೂ ಖ್ಯಾತನಾಮ ಬಿಲ್ಡರ್ ಆಗಿ ಗುರುತಿಸಿಕೊಂಡಿದೆ. ವಸತಿ ಸಮುಚ್ಚಯಗಳು, ವಾಣಿಜ್ಯ ಸಂಕೀರ್ಣಗಳು ಮತ್ತು ಮಾಲ್‌ಗಳನ್ನು ನಿರ್ಮಿಸುವಲ್ಲಿ 31 ವರ್ಷಗಳ ವಿಶಾಲ ಅನುಭವ ಹೊಂದಿರುವ ಸಂಸ್ಥೆಯು ಮಂಗಳೂರಿನ ಪ್ರಮುಖ ಪ್ರಾಪರ್ಟಿ ಡೆವಲಪರ್ ಆಗಿದೆ. ಅತ್ಯುತ್ತಮ ಗುಣಮಟ್ಟ ಹಾಗೂ ಆಕರ್ಷಕ ವಿನ್ಯಾಸಕ್ಕೆ ಹೆಸರುವಾಸಿಯಾಗಿರುವ ಮೊಹ್ತಿಶಾಮ್ 50ರಷ್ಟು ವಸತಿ, ವಾಣಿಜ್ಯ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿದ್ದು, ಈಗ ಸುಮಾರು 50 ಎಕರೆಯಷ್ಟು ವಿಶಾಲ ಪ್ರದೇಶದಲ್ಲಿ ಯೋಜನೆಗಳನ್ನು ಹಾಕಿಕೊಂಡಿದೆ.

“ಪ್ರತೀ ಬಾರಿ ಅತ್ಯುತ್ತಮ ಗುಣಮಟ್ಟದ, ವಿಶ್ವದರ್ಜೆಯ ಸೌಲಭ್ಯಗಳಿರುವ, ಅತ್ಯಾಧುನಿಕ ಜೀವನ ಶೈಲಿಯ ಶ್ರೇಷ್ಠ, ವಿಲಾಸಿ ವಸತಿ ಯೋಜನೆಗಳನ್ನು ನೀಡುವ ಮೂಲಕ ಮಂಗಳೂರಿನ ಸೌಂದರ್ಯ ಹಾಗೂ ಸೌಲಭ್ಯ ಉನ್ನತ ಮಟ್ಟಕ್ಕೇರಿಸುವುದು ಮೊಹ್ತಿಶಾಮ್‌ನ ಗುರಿ. ಈ ಪ್ರಶಸ್ತಿ ಅದನ್ನು ಗುರುತಿಸಿದ್ದು ಸಂತಸ ತಂದಿದೆ” ಎಂದು ಮೊಹ್ತಿಶಾಮ್ ಕಾಂಪ್ಲೆಕ್ಸಸ್‌ ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಎಸ್.ಎಂ.ಅರ್ಷದ್ ಹೇಳಿದ್ದಾರೆ.