ಶಿಕ್ಷಣದ ಮೇಲೆ ಪ್ರಭಾವ ಬೀರಿದ ಕೋವಿಡ್-19…

0
1189

ಸನ್ಮಾರ್ಗ ಲೇಖನ

ದಿವ್ಯತುಳಸಿ ಕೆ

ಶಿಕ್ಷಣ ಎನ್ನುವಂತದ್ದು ಒಂದು ಮಗುವಿನ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಮಾನವನ ಶಕ್ತಿಯನ್ನು ಮುಗಿಲೆತ್ತರಕ್ಕೆ ತರುವಂತಹ ಕಾರ್ಯವನ್ನು ಮಾಡುತ್ತದೆ. ಶಿಕ್ಷಣವು ಹೆಚ್ಚು ವ್ಯಾಪಕ ಮತ್ತು ಪ್ರತಿಯೊಬ್ಬರ ಪರಿಪೂರ್ಣವಾದ ಯಶಸ್ಸುಆದರೆ ಇತ್ತೀಚೆಗೆ ಜಗತ್ತಿನ ಎಲ್ಲಾ ಕ್ಷೇತ್ರದಲ್ಲೂ ಆಮೂಲಾಗ್ರ ಬದಲಾವಣೆಗೆ ಕಾರಣವಾಗಿದೆ. ಶೈಕ್ಷಣಿಕ ಕ್ಷೇತ್ರದ ಮೇಲೆ ಬೀರಿದ ಪ್ರಭಾವ ಇಡೀ ಶಿಕ್ಷಣ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಿದೆ. ಶಿಕ್ಷಣ ವ್ಯವಸ್ಥೆಯನ್ನು ಬದಲಾವಣೆ ಮಾಡುವಲ್ಲಿ ಈ ವೈರಸ್ ಹೆಚ್ಚು ಪಾತ್ರವಹಿಸಿದೆ ಚಿಗುರುವ ಮಕ್ಕಳ ಚಿಗುರಿದ ಮನಸ್ಸಿನಲ್ಲಿ ಯಾಂತ್ರಿಕ ಶಿಕ್ಷಣ ಹೂಬಿಟ್ಟಾಗ ಕ್ಷಣಿಕವಾಗಿ ಉಳಿಯುವುದು ನಿಜ ಸಂಗತಿ.

ತಂತ್ರಜ್ಞಾನ ಅಲಭ್ಯತೆಯ ಕಾರಣದಿಂದಾಗಿ ಮಕ್ಕಳು ಆನ್ಲೈನ್ ಶಿಕ್ಷಣ ಪಡೆಯಲು ಸಾಧ್ಯವಾಗದೆ ವಂಚಿತರಾಗಿದ್ದಾರೆ. ಮಗುವಿಗೆ ಯಾವ ಶಿಕ್ಷಣವು ಯಾವ ತರಗತಿಯಲ್ಲಿ ಸಿಗಬೇಕಿತ್ತು ಅದು ಮಗುವಿಗೆ ಸಿಗಲಿಲ್ಲ. ನಲಿಕಲಿ, ಆಟ-ಪಾಠ ಪ್ರತಿ ಮಗುವಿನ ಪ್ರಗತಿಗೆ ಅರಳುವ ಹೂವುಗಳು ಆದರೆ ಕೋವಿಡ್ ನಿಂದಾಗಿ ಮಕ್ಕಳ ಶಿಕ್ಷಣ ಮಾನಸಿಕ ಮತ್ತು ದೈಹಿಕ ಆರೋಗ್ಯ ಏರುಪೇರಾಗಿದೆ ಈ ಸಮಸ್ಯೆಗಳು ಅವರನ್ನು ದೀರ್ಘಕಾಲ ಕಾಡುತ್ತದೆ. ಈ ಕೊರೋನಾದ ಬಲೆಗೆ ಸಿಕ್ಕಿ ಮಕ್ಕಳು ತಮ್ಮ ಪ್ರತಿಭೆಗಳಿಂದ ವಂಚಿತರಾಗುತ್ತಿದ್ದಾರೆ. ಎಲ್ಲಾ ಮಕ್ಕಳಿಗೂ ತಮ್ಮದೇ ಆದ ಪ್ರತಿಭೆಗಳು ಇರುತ್ತದೆ ಆದರೆ ಈ ಒಂದು ಸನ್ನಿವೇಶದಿಂದಾಗಿ ಮಕ್ಕಳು ಮಾನಸಿಕವಾಗಿ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇಲ್ಲಿ ಪ್ರತಿ ಮಗುವಿನಲ್ಲಿ ಉಂಟಾಗುವ ಬದಲಾವಣೆಯು ಶಿಕ್ಷಣದ ಮೇಲೆ ಆಸಕ್ತಿ ಕುಂಟುವಂತೆ ಪ್ರಭಾವ ಬೀರಿದೆ ಇದಕ್ಕೆಲ್ಲ ಪ್ರಮುಖ ಕಾರಣ ಆನ್ಲೈನ್ ಶಿಕ್ಷಣ, ಆ ಮೂಲಕ ಪ್ರತಿ ಮಗುವು ಯಾಂತ್ರಿಕ ಶಿಕ್ಷಣ ಬದುಕಿಗೆ ನೀಮಿತವಾದಂತೆ ಕಾಣುತ್ತದೆ.

ತಾಂತ್ರಿಕವಾಗಿ ನಾವು ಎಷ್ಟೇ ಮುಂದುವರೆದರೂ ಕೂಡ ಪ್ರಾಥಮಿಕ ಹಂತದಲ್ಲಿ ಶಿಕ್ಷಣವನ್ನು ಪಡೆದುಕೊಳ್ಳುವುದು ಸುಲಭದ ಕೆಲಸ ಅಲ್ಲ. ಆನ್ಲೈನ್ ತರಗತಿಗಳಿಂದ ಮಕ್ಕಳು ಕಣ್ಣಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಲ್ಲದೆ ತಮ್ಮ ಸಮನಾದ ಮಿತ್ರರೊಂದಿಗೆ ಒಡನಾಟದ ಜೊತೆ ಕಲಿಯುವಂತಹ ಸುಮಧುರ ಅನುಭವಗಳು ಮಕ್ಕಳಿಗೆ ಸಿಗಲಿಲ್ಲ ಅದೇ ರೀತಿ ಬದುಕಿನ ಪಾಠಗಳು ಗೌರವ ಭಾವನೆ ,ಬದುಕಿನ ನಿರರ್ಥಕತೆಯು ಪ್ರತಿ ಮಗುವಿನಲ್ಲಿ ಮಾಯವಾಗಿ ಹೋಗಿದೆ ಹಾಗಾಗಿ ಪ್ರತಿ ಮಗುವೂ ಆಟದ ಮೂಲಕ ಕಲಿತರೆ ಮಾತ್ರ ಒಂದು ಪೂರ್ಣ ಕಲಿಕೆ ಸಾಧ್ಯ.

ದಿವ್ಯತುಳಸಿ ಕೆ
ದ್ವಿತೀಯ ಬಿಎಡ್,
ಸಂತ ಅಲೋಶಿಯಸ್ ಕಾಲೇಜು ಮಂಗಳೂರು.