ಮುಸ್ಲಿಮರು ಎರಡು ಮಕ್ಕಳ ಮಿತಿಯನ್ನು ಹೊಂದಬೇಕು: ಕಟಾರಿಯಾ ವಿವಾದಾತ್ಮಕ ಹೇಳಿಕೆ

0
676

“ಮುಸ್ಲಿಮರು ಬಹು ಸಂಖ್ಯೆಯಲ್ಲಿರುವುದರಿಂದ ಅವರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಬಾರದು” ಎಂಬ ಹೇಳಿಕೆಯೊಂದಿಗೆ ಈ ಹಿಂದೆ ವಿವಾದಕ್ಕೀಡಾಗಿದ್ದ ರಾಜಸ್ಥಾನದ ವಿರೋಧ ಪಕ್ಷ ನಾಯಕ ಗುಲಾಬ್ ಚಂದ್ ಕಟಾರಿಯಾ ಮತ್ತೊಮ್ಮೆ ಮುಸ್ಲಿಮ್ ಸಮುದಾಯದ ಮೇಲೆ ಹೇಳಿಕೆಯನ್ನು ನೀಡಿ ವಿವಾದಕ್ಕೆ ಗುರಿಯಾಗಿದ್ದಾರೆ.

“ದೇಶದಲ್ಲಿ ಮುಸ್ಲಿಮರ ಜನಸಂಖ್ಯೆಯನ್ನು ನಿಯಂತ್ರಿಸಬೇಕಾದ ಕ್ರಮಗಳನ್ನು ಕೈಗೊಳ್ಳಬೇಕಿದೆ. ನಾವು(ಹಿಂದೂಗಳು) ಎರಡು ಮಕ್ಕಳ ಮಿತಿಯನ್ನು ಪಾಲಿಸುತ್ತಿರುವಾಗ ಅವರೂ(ಮುಸ್ಲಿಮರು) ಕೂಡ ತಮ್ಮ ಕುಟುಂಬದ ಮಿತಿಯನ್ನು ಎರಡೇ ಮಕ್ಕಳಿಗೆ ಸೀಮಿತಗೊಳಿಸಬೇಕು. ಎಲ್ಲ ರೀತಿಯ ಅಭಿವೃದ್ಧಿ ಯೋಜನೆಗಳು ಸೋಲನ್ನು ಹೊಂದಲು ಮುಸ್ಲಿಮರ ಜನಸಂಖ್ಯೆಯ ಮೇಲೆ ನಿಯಂತ್ರಣವಿಲ್ಲದಿರುವುದೇ ಕಾರಣ” ಎಂದು ಕಟಾರಿಯಾ ಹೇಳಿಕೆ ನೀಡಿದ್ದಾರೆ.

‘ಒಂದು ವೇಳೆ ದೇಶದಲ್ಲಿ ಕಾನೂನನ್ನು ತಿದ್ದುಪಡಿಗೊಳಪಡಿಸದೇ ಇದ್ದರೇ ಮುಂಬರುವ 50 ವರ್ಷಗಳಲ್ಲಿ ಈ ಪರಿಸ್ಥಿತಿಯು ತಾರಕಕ್ಕೇರಬಹುದು’ ಎಂದವರು ಹೇಳಿದರು. ಇತ್ತೀಚೆಗೆ ರಾಜಸ್ಥಾನದಲ್ಲಿ ಬಿಜೆಪಿಯು ಹೀನಾಯ ಸೋಲನ್ನು ಅನುಭವಿಸಿದ ನಂತರ ಕಟಾರಿಯಾ ಅವಿರೋಧವಾಗಿ ವಿರೋಧಪಕ್ಷ ನಾಯಕರಾಗಿ ಆಯ್ಕೆಯಾಗಿದ್ದಾರೆ.