ಉಡುಪಿ: ಶಾಸಕ ರಘುಪತಿ ಭಟ್‌ಗೆ ಜೀವ ಬೆದರಿಕೆ

0
361

ಸನ್ಮಾರ್ಗ ವಾರ್ತೆ

ಉಡುಪಿ: ಹಿಜಾಬ್ ವಿವಾದದ ಹಿನ್ನಲೆಯಲ್ಲಿ ಉಡುಪಿ ಶಾಸಕ ಕೆ ರಘುಪತಿ ಭಟ್ ಅವರಿಗೆ ನಿರಂತರ ಬೆದರಿಕೆ ಕರೆಗಳು ಈ ಬಗ್ಗೆ ಗೃಹಸಚಿವರಿಗೆ ಮೌಖಿಕವಾಗಿ ರಘುಪತಿಭಟ್ ಮಾಹಿತಿ‌ನೀಡಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿರುವ ಶಾಸಕ ರಘುಪತಿ ಭಟ್ ವಿದೇಶಗಳಿಂದ ನಿರಂತರವಾಗಿ ಫೋನ್ ಕರೆಗಳು ಬರುತ್ತಿದ್ದು ಇಂಟರ್ನೆಟ್ ಮೂಲಕ ಕಾಲ್ ಮಾಡಿ ಬೆದರಿಕೆ ಒಡ್ಡುತ್ತಿದ್ದಾರೆ. ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಗೃಹಸಚಿವರಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದೇನೆ. ಉಡುಪಿ ಜಿಲ್ಲೆಯ ಮುಸಲ್ಮಾನರಿಂದ ನನಗೆ ಪ್ರತಿರೋಧ ಬಂದಿಲ್ಲ.

ಉಡುಪಿ ಬೆಂಗಳೂರಿನಲ್ಲಿ ಮುಸಲ್ಮಾನರು ನನ್ನ ಬೆಂಬಲಕ್ಕೆ ಇದ್ದಾರೆ. ಬಾಲ್ಯದಿಂದಲೇ ಇಂತಹ ಬೆದರಿಕೆಗಳನ್ನು ನಾನು ಕಂಡಿದ್ದೇನೆ. ಉಡುಪಿಯಲ್ಲಿ ಮುಸ್ಲಿಮರು ನನಗೆ ಬೆಂಬಲ ಸೂಚಿಸಿದ್ದಾರೆ. ನಿಮ್ಮ ನಿಲುವು ಸರಿಯಿದೆ ಎಂದು ಹೇಳಿದ್ದಾರೆ. ನನ್ನ ಭದ್ರತೆಗೆ ಎಸ್ಪಿಯವರು ಕರೆ ಮಾಡಿದ್ದು ಉಡುಪಿ ಕ್ಷೇತ್ರದ ಜನರೇ ನನಗೆ ಸೆಕ್ಯೂರಿಟಿ ಗಾರ್ಡ್ಸ್ ಎಂದು ಹೇಳಿದ ಅವರು ಯಾವುದೇ ಬೆದರಿಕೆಗೆ ನಾನು ಹೆದರುವುದಿಲ್ಲ ಅಂತ ಸ್ಪಷ್ಟಪಡಿಸಿದರು.