ನಮಗೂ ಯುದ್ದ ಇಷ್ಟವಿಲ್ಲ ಶಾಂತಿ ಬೇಕಿದೆ ಎಂದ ರಷ್ಯಾ ಅಧ್ಯಕ್ಷ ಪುತಿನ್

0
249

 

ಮಾಸ್ಕೊ: ಉಕ್ರೇನ್ ವಿಚಾರವಾಗಿ ಪಶ್ಚಿಮದ ದೇಶಗಳ ಜೊತೆ ಮಾತುಕತೆ ನಡೆಸಲು ಸಿದ್ಧರಿದ್ದೇವೆ. ನಮಗೂ ಯುದ್ದ ಇಷ್ಟವಿಲ್ಲ. ಶಾಂತಿ ಬೇಕಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಹೇಳಿದ್ದಾರೆ.

ನಾವು ಜತೆಯಾಗಿ ಕೆಲಸ ಮಾಡಲು ಬಯಸುತ್ತೇವೆ, ಉಕ್ರೇನ್ ವಿಚಾರವಾಗಿ ಚರ್ಚೆಗೆ ಸಿದ್ಧರಿದ್ದೇವೆ ಎಂದು ಜರ್ಮನಿ ಚಾನ್ಸಲರ್ ಒಲಾಫ್ ಶಾಝ್ ಜತೆ ಮಾತುಕತೆಯ ಬಳಿಕ ವ್ಲಾಡಿಯರ್ ಪುತಿನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ನಮಗೂ ಯುದ್ಧ ಬೇಕಾಗಿಲ್ಲ. ಆದರೆ ಭದ್ರತೆ ಮತ್ತು ಸುರಕ್ಷತೆ ವಿಚಾರವಾಗಿ ವಾಷಿಂಗ್ಟನ್ ಮತ್ತು ನ್ಯಾಟೊ ಕೈಗೊಳ್ಳುವ ನಿರ್ಧಾರಗಳನ್ನು ಕುರುಡಾಗಿ ಒಪ್ಪಲಾಗದು ಎಂದು ಪುತಿನ್ ಹೇಳಿದ್ದಾರೆ.

ಉಕ್ರೇನ್ ವಿಚಾರವಾಗಿ ಅಮೆರಿಕ ಮತ್ತು ರಷ್ಯಾ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಭಾರತೀಯ ರಾಯಭಾರ ಕಚೇರಿ ಕೂಡ ಮಂಗಳವಾರ ಉಕ್ರೇನ್‌ನಲ್ಲಿರುವ ಭಾರತೀಯರು ಕೂಡಲೇ ಅಲ್ಲಿಂದ ತೆರಳುವಂತೆ ಸೂಚನೆ ನೀಡಿತ್ತು. ಜತೆಗೆ ಅಮೆರಿಕ ರಷ್ಯಾ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವಂತೆ ಒತ್ತಡ ಹೇರುತ್ತಿದ್ದು, ಪದೇ ಪದೆ ಎಚ್ಚರಿಕೆ ನೀಡುತ್ತಿದೆ.