ಸನ್ಮಾರ್ಗ ವಾರ್ತೆ
ಲಕ್ನೊ: ಡಾ.ಕಫೀಲ್ ಖಾನ್‍ರಿಗೆ ಉತ್ತರ ಪ್ರದೇಶ ವಿಧಾನ ಪರಿಷತ್ ಟಿಕೆಟ್ ಅನ್ನು ಸಮಾಜವಾದಿ ಪಾರ್ಟಿ ನೀಡಿದೆ. ಸಮಾಜವಾದಿ ಪಾರ್ಟಿ ರಾಷ್ಟ್ರೀಯ ಕಾರ್ಯದರ್ಶಿ ರಾಜೇಂದ್ರ ಚೌಧರಿ ಕಫಿಲ್ ಖಾನ್‍ರ ಅಭ್ಯರ್ಥಿತ್ವವನ್ನು ಪ್ರಕಟಿಸಿದರು. ದೇವರಿಯ ಕುಶಿನಗರ ಸೀಟಿನಿಂದ ಇವರು ಸ್ಪರ್ಧಿಸಲಿದ್ದಾರೆ. 2016ರಲ್ಲಿ ಎಸ್‍ಪಿ ನಾಯಕ ರಾಮವಧ್ ಯಾದವ್‍ರು ಸ್ಪರ್ಧಿಸಿದ್ದ ಸೀಟು ಇದು.
ವಿಧಾನ ಪರಿಷತ್‍ನ 36 ಸೀಟುಗಳಿಗೆ ಎಪ್ರಿಲ್ ಒಂಬತ್ತರಂದು ಮತದಾನ ನಡೆಯಲಿದೆ. 12ಕ್ಕೆ ಮತ ಎಣಿಕೆ ನಡೆಯಲಿದೆ. ಅಭ್ಯರ್ಥಿಗಳಿಗೆ ಸಂಬಂಧಿಸಿ ಕಫೀಲ್ ಖಾನ್ ಸಮಾಜವಾದಿ ಪಾರ್ಟಿ ಅಧ್ಯಕ್ಷ ಅಖಿಲೇಶ್ ಯಾದವ್‍ರನ್ನು ಭೇಟಿಯಾಗಿ, ತಮ್ಮ ಪುಸ್ತಕ ದಿ ಗೊರಕ್‍ಪುರ್ ಹಾಸ್ಪಿಟಲ್ ಟ್ರಾಜಿಡಿ ಅಖೀಲೇಶ್‍ರಿಗೆ ನೀಡಿದ್ದರು.
2017ರ ಆಗಸ್ಟ್‌ನಲ್ಲಿ ಗೊರಕಪುರದ ಬಿಆರ್‌ಡಿ ಮೆಡಿಕಲ್ ಕಾಲೇಜಿನಲ್ಲಿ ಆಕ್ಸಿಜನ್ ಸಿಗದೆ 63 ಶಿಶುಗಳ ಸಾವಿಗೆ ಸಂಬಂಧಿಸಿ ಕಫೀಲ್ ಖಾನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿತ್ತು. ಘಟನೆಯಲ್ಲಿ ಉತ್ತರಪ್ರದೇಶ ಸರಕಾರದ ಪ್ರಮಾದವನ್ನು ಕಫೀಲ್ ಬೆಟ್ಟು ಮಾಡಿದ್ದರು. ಆದರೆ, ನಂತರ ಕಫೀಲ್ ಖಾನ್‍ರನ್ನು ಸೇವೆಯಿಂದ ಉತ್ತರಪ್ರದೇಶ ಸರಕಾರ ತೆಗೆದುಹಾಕಿತ್ತು.












