ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಬಂಧಿತರ ಶರೀರದ ಸ್ಯಾಂಪಲ್ ತೆಗೆಯುವ ಅಧಿಕಾರ ಪೊಲೀಸರಿಗೆ ಕೊಡುವ ವಿವಾದಾತ್ಮಕ ಮಸೂದೆ ಮಂಡಿಸಿದ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ಲೋಕಸಭೆಯಲ್ಲಿ ಪ್ರತಿಪಕ್ಷ ಎದುರಿಸಿದ್ದು ಲಖೀಂಪುರ ಖೇರಿ ನಾಲ್ವರು ರೈತರ ಮೇಲೆ ವಾಹನ ಚಲಾಯಿಸಿ ಕೊಂದ ಪ್ರಕರಣದ ಮುಖ್ಯ ಆರೋಪಿ ಆಶಿಷ್ ಮಿಶ್ರನ ತಂದೆ ಅಜಯ್ ಮಿಶ್ರ ತಿಂಗಳ ನಂತರ ಲೋಕಸಭೆಯಲ್ಲಿ ಕಾಣಿಸಿಕೊಂಡಿದ್ದು, ಸಚಿವರನ್ನು ವಜಾಮಾಡಬೇಕೆಂದು ಪ್ರತಿಪಕ್ಷ ನಿರಂತರ ಆಗ್ರಹಿಸುತ್ತಿದ್ದವು.
ಮಸೂದೆ ಮಂಡಿಸಲು ಎಂದು ನಿಂತ ಅಜಯ್ ಮಿಶ್ರರ ವಿರುದ್ಧ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮತ್ತು ಇತರರು ಆರೋಪಗಳ ಸುರಿಮಳೆಗೈದರು. ಆರೋಪಗಳನ್ನು ಸಾಬೀತುಪಡಿಸಲು ಅಜಯ್ ಮಿಶ್ರ ಸವಾಲು ಹಾಕಿದರು. ಆರೋಪ ಸಾಬೀತುಗೊಳಿಸಿದರೆ ರಾಜಕೀಯ ಬಿಡುತ್ತೇನೆ ಎಂದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಲ್ಲಿಸಿದ ನಾಮಪತ್ರದೊಂದಿಗೆ ಅಫಿದಾವಿತ್ತಿದೆ. ತನ್ನ ವಿರುದ್ಧ ಒಂದು ಪ್ರಕರಣವೂ ಇಲ್ಲ. ಒಂದು ನಿಮಿಷವೂ ಜೈಲಲ್ಲಿ ಕೂತಿಲ್ಲ. ಆರೋಪ ಸಾಬೀತುಪಡಿಸಿದರೆ ರಾಜಕೀಯ ಬಿಡುತ್ತೇನೆ ಎಂದು ಅವರು ಹೇಳಿದರು.












