ಸನ್ಮಾರ್ಗ ವಾರ್ತೆ
ಬೀಜಿಂಗ್: ಕೊರೋನ ಬೆದರಿಕೆ ಹಿನ್ನೆಲೆಯಿಂದ ಚೀನದ ಶಾಂಘೈ ನಗರದಲ್ಲಿ ಅಧಿಕಾರಿಗಳು ಪುನಃ ಲಾಕ್‍ಡೌನ್ ಘೋಷಿಸಿದ್ದಾರೆ. ಇಲ್ಲಿ 26 ದಶಲಕ್ಷ ಜನಸಂಖ್ಯೆ ಇದೆ. ವ್ಯಾಪಕ ಮತ್ತು ಬೃಹತ್ ಸಂಖ್ಯೆಯಲ್ಲಿ ಕೊರೊನ ಪರೀಕ್ಷೆಯೂ ಆರಂಭವಾಗಿದೆ. ಇಲ್ಲಿ ಕೊರೋನ ವೇಗದಿಂದ ಹರಡುತ್ತಿದೆ. ಈ ಹಿಂದೆ ಇಲ್ಲಿ ಪೂರ್ಣ ಪ್ರಮಾಣದ ಲಾಕ್‍ಡೌನ್ ಇರಲಿಲ್ಲ. ಎರಡು ವರ್ಷ ಮೊದಲು ಕೊರೋನ ಸ್ಫೋಟದ ನಂತರ ಚೀನದಲ್ಲಿ ಆಗುತ್ತಿರುವ ದೊಡ್ಡ ಪ್ರಮಾಣದ ಲಾಕ್ ಡೌನ್‌ನ್ನು ಶಾಂಘೈ ಎದುರಿಸುತ್ತಿದೆ.
ಇಲ್ಲಿ ಸಾಮೂಹಿಕ ಕೊರೋನ ಪರೀಕ್ಷೆ ನಡೆಯುತ್ತಿದ್ದು, ಶಾಂಘೈಯ ಪುಡೊಂಗ್ ಆರ್ಥಿಕ ಜಿಲ್ಲೆಯ ಸಮೀಪದ ಪ್ರದೇಶಗಳನ್ನು ಶುಕ್ರವಾರದವರೆಗೆ ಬಂದ್ ಮಾಡುವುದಾಗಿ ಸ್ಥಳೀಯ ಸರಕಾರ ತಿಳಿಸಿತು. ಲಾಕ್‍ಡೌನ್ ಎರಡನೆ ಹಂತದಲ್ಲಿ, ನಗರವನ್ನು ವಿಭಜಿಸುವ ಹುವಾಂಗ್‍ಪು ನದಿ ಪಶ್ಚಿಮಭಾಗದಲ್ಲಿ ಲಾಕ್ ಡೌನ್ ಪ್ರದೇಶದಲ್ಲಿ ಐದು ದಿನಗಳ ಲಾಕ್‍ಡೌನ್ ಹೇರಲಾಗಿದೆ.
ಶಾಂಘೈಯಲ್ಲಿ ಲಾಕ್‌ಡೌನ್ ಶುರುವಾದೊಡನೆ ಕಚ್ಚಾ ತೈಲ ದರ ಬ್ಯಾರಲ್‌ಗೆ 4.50 ಡಾಲರ್ ಕಡಿಮೆಯಾಗಿದೆ. ಈ ಹಿಂದೆಯೇ ಶಾಂಘೈಯ ಡೆಸ್ನಿಲ್ಯಾಂಡ್ ಬಂದ್ ಮಾಡಲಾಗಿತ್ತು. ವಾಹನ ತಯಾರಿಸುವ ಟೆಸ್ಲೊ ತಾತ್ಕಾಲಿಕವಾಗಿ ಕೆಲಸ ನಿಲ್ಲಿಸಿದೆ. ರವಿವಾರ 3500 ಮಂದಿಗೆ ಶಾಂಘೈಯಲ್ಲಿ ಕೊರೋನ ದೃಢಪಟ್ಟಿದೆ. ಈ ತಿಂಗಳು ಚೀನದಲ್ಲಿ 56,000 ಕೊರೋನ ಪ್ರಕರಣ ವರದಿಯಾಗಿದೆ.












