ಸನ್ಮಾರ್ಗ ವಾರ್ತೆ
ಗ್ವಾಲಿಯರ್: ಮಧ್ಯಪ್ರದೇಶದ ಒಂದು ಕುಟುಂಬಕ್ಕೆ 3,419 ಕೋಟಿ ರೂಪಾಯಿಯ ವಿದ್ಯುತ್ ಬಿಲ್ ಲಭಿಸಿರುವುದು ಸುದ್ದಿಯಾಗಿದೆ. ಗ್ವಾಲಿಯರ್‌ನ ಪ್ರಿಯಾಂಕಾ ಗುಪ್ತ ಎಂಬ ಬಳಕೆದಾರರಿಗೆ ವಿದ್ಯುತ್ ಇಲಾಖೆ ನೀಡಿದ ಬಿಲ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.
ಜುಲೈ 20ರಂದು 3,419 ಕೋಟಿ ರೂಪಾಯಿಯ ಬಿಲ್ ಬಂದಿತ್ತು. ನಂತರ ವಿದ್ಯುತ್ ವಿತರಣಾ ಕಂಪೆನಿಯ ಪೋರ್ಟಲ್‍ಗೆ ಹೋಗಿ ಪರೀಕ್ಷಿಸಿದಾಗಲೂ ಬಿಲ್ ಮೊತ್ತ ಅಷ್ಟೇ ಇತ್ತು. ನಂತರ ಪ್ರಮಾದ ಪತ್ತೆಯಾಗಿ 1,300 ರೂಪಾಯಿಯ ಹೊಸ ಬಿಲ್ ಬಂತು ಎಂದು ಪ್ರಿಯಾಂಕರ ಪತಿ ಸಂಜೀವ್ ಕಂಕನೆ ಹೇಳಿದರು. ವಿದ್ಯುತ್ ಬಿಲ್ ಲೆಕ್ಕ ನೋಡಿ ತಂದೆ ಅನಾರೋಗ್ಯಗೊಂಡುದನ್ನು ಅವರು ಹೇಳಿದರು.
ಮನುಷ್ಯ ಸಹಜವಾದ ಪ್ರಮಾದ ಇದು ಎಂದು ಸರಕಾರದ ಅಧೀನದ ಮಧ್ಯಕ್ಷೇತ್ರ ವಿದ್ಯುತ್ ವಿತರಣ್ ಕಂಪೆನಿ ಹೇಳಿದೆ. ಪ್ರಮಾದ ವ್ಯಸಗಿದ ಸಿಬ್ಬಂದಿಯ ವಿರುದ್ಧ ಕ್ರಮ ಜರಗಿಸುವುದಾಗುವುದು. ಹಾಗೂ ಬಳಕೆದಾರರಿಗೆ 1300 ರೂಪಾಯಿಯ ಬಿಲ್ ನೀಡಲಾಗಿದೆ ಎಂದು ಜನರಲ್ ಮ್ಯಾನೇಜರ್ ತಿಳಿಸಿದರು. ಸಂಬಂಧಿಸಿದ ಸಿಬ್ಬಂದಿ ವಿರುದ್ಧ ಕ್ರಮ ಜರಗಿಸಲಾಗುವುದೆಂದು ವಿದ್ಯುತ್ ಸಚಿವ ಪ್ರದ್ಯುಮ್ನ್ ಸಿಂಗ್ ತೋಮರ್ ಹೇಳಿದರು.












