ಸನ್ಮಾರ್ಗ ವಾರ್ತೆ
ಹುಬ್ಬಳ್ಳಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಬುಧವಾರ ಬೆಂಗೇರಿಯಲ್ಲಿರುವ ಖಾದಿ ಧ್ವಜ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘದ (ಕೆಕೆಜಿಎಸ್‌ಎಸ್) ಪ್ರತಿಭಟನಾ ನಿರತ ಕಾರ್ಯಕರ್ತರಿಗೆ ಬೆಂಬಲ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಧ್ವಜ ತಯಾರಿಕಾ ಪ್ರಕ್ರಿಯೆಯನ್ನು ತಿಳಿದುಕೊಂಡು ಕಾರ್ಯಕರ್ತರೊಂದಿಗೆ ಸಂವಾದ ನಡೆಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಖಾದಿ ಮತ್ತು ಚರಕ ಮಹಾತ್ಮ ಗಾಂಧಿ ಮತ್ತು ಭಾರತವನ್ನು ಪ್ರತಿನಿಧಿಸುತ್ತದೆ. ಆದರೆ ಬಿಜೆಪಿಯು ದೇಶದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಂದ ಉದ್ಯಮಗಳನ್ನು ಕಿತ್ತುಹಾಕುತ್ತಿದೆ. ಎಲ್ಲವನ್ನೂ ತನ್ನ ಒಲವು ಹೊಂದಿರುವ ಜನರಿಂದಲೇ ಉತ್ಪಾದಿಸಬೇಕು ಎಂದು ನಿರೀಕ್ಷಿಸುತ್ತದೆ. ಈ ಜನರ (ಖಾದಿ ಧ್ವಜ ನೇಕಾರರು) ಜೇಬಿನಿಂದ ಹಣವನ್ನು ತೆಗೆದುಕೊಂಡು ಅವರ ನೆಚ್ಚಿನ ಜನರ ಜೇಬಿಗೆ ಹಾಕುವುದು ಬಿಜೆಪಿಯ ಆಲೋಚನೆಯಾಗಿದೆ. ಅದಕ್ಕಾಗಿಯೇ ಅವರು ಧ್ವಜ ನಿಯಮಗಳನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಿದರು.
‘ಸಾಂಪ್ರದಾಯಿಕವಾಗಿ ರಾಷ್ಟ್ರಧ್ವಜ ಖಾದಿಯಿಂದ ಮಾಡಲಾಗುತ್ತದೆ. ದೇಶದ ಏಕತೆಯನ್ನು ಪ್ರತಿನಿಧಿಸುವ ಖಾದಿಯಿಂದ ಮಾಡಿದ ರಾಷ್ಟ್ರಧ್ವಜದ ಪರವಾಗಿ ನಾವಿದ್ದೇವೆ’ ಎಂದು ಹೇಳಿದರು.
कर्नाटक खादी ग्रामोद्योग के सभी साथियों से मिलकर बहुत खुशी हुई।
इतिहास गवाह है, 'हर घर तिरंगा' मुहीम चलाने वाले, उस देशद्रोही संगठन से निकले हैं, जिन्होंने 52 सालों तक तिरंगा नहीं फहराया।
आज़ादी की लड़ाई से, ये कांग्रेस पार्टी को तब भी नहीं रोक पाए और आज भी नहीं रोक पाएंगे। pic.twitter.com/tp2fjLki75
— Rahul Gandhi (@RahulGandhi) August 3, 2022
‘ಕೇಂದ್ರ ಸರ್ಕಾರ ಮಧ್ಯಮ ಮತ್ತು ಚಿಕ್ಕ ಉದ್ಯಮಿಗಳ ಕೈಗಳಿಂದ ಕಸಿದುಕೊಂಡು, ಮೂರು ನಾಲ್ಕು ದೊಡ್ಡ ಉದ್ಯಮಿಗಳಿಗೆ ನೀಡುತ್ತಿದೆ. ಕೃಷಿ ಕಾನೂನು, ನೋಟು ಅಮಾನ್ಯೀಕರಣ ನೀತಿ ಕೂಡ ಬಡವರ ವಿರೋಧಿಯಾಗಿದೆ. ಇವು ತಪ್ಪು ನಿರ್ಧಾರ’ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಕಳೆದ ತಿಂಗಳು ಘಟಕಕ್ಕೆ ಭೇಟಿ ನೀಡಿದ್ದರು.












