ಇರಾನ್ ದಾಳಿಯ ಭೀತಿ: ಇಸ್ರೇಲ್‌ನಲ್ಲಿ ಕಟ್ಟೆಚ್ಚರ

0
5

ಸನ್ಮಾರ್ಗ ವಾರ್ತೆ

ಇಸ್ರೇಲ್ ಪ್ರಧಾನಿ ಬೆಂಜಮೀನ್ ನೇತನ್ಯಾಹು ಭದ್ರತಾ ಸಚಿವ ಸಂಪುಟ ಸಭೆಯನ್ನು ನಡೆಸಿದ್ದಾರೆ. ಇರಾನ್ ಅನಿರೀಕ್ಷಿತ ದಾಳಿ ನಡೆಸಬಹುದು ಎಂಬ ಗುಪ್ತಚರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಇಸ್ರೇಲ್ ಕಟ್ಟೇಚ್ಚರದಲ್ಲಿದೆ.

ಅಮೆರಿಕಾದ ಬೆಂಬಲವಿಲ್ಲದೆ ಇರಾನ್ ವಿರುದ್ಧ ಏಕಾಂಗಿಯಾಗಿ ಮಿಲಿಟರಿ ಕ್ರಮ ಕೈಗೊಳ್ಳಲು ಸೇನೆ ಸಿದ್ಧವಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳ ವಕ್ತಾರ ಹೇಳಿದ್ದಾರೆ.

ತನ್ನ ತೈಲ ರಫ್ತಿಗೆ ಅಡ್ಡಿ ಉಂಟಾದರೆ ಈ ಪ್ರದೇಶದಿಂದ ಒಂದು ಹನಿ ತೈಲವೂ ಹೊರಹೋಗಲು ಬಿಡುವುದಿಲ್ಲ ಎಂದು ಇರಾನ್ ಕಠಿಣ ಎಚ್ಚರಿಕೆ ನೀಡಿದೆ.

ಇರಾನಿನ ತೈಲ ರಫ್ತಿಗೆ ಅವಕಾಶ ನೀಡದಿದ್ದರೆ ಯಾವುದೇ ತೈಲ ಸಾಗಾಟಕ್ಕೂ ಅವಕಾಶ ನೀಡುವುದಿಲ್ಲ, ಅಮೆರಿಕಕ್ಕೆ ಸಹಾಯ ಮಾಡುವ ನೆರೆಯ ದೇಶಗಳು ಪ್ರತೀಕಾರವನ್ನು ಎದುರಿಸಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇರಾನ್ ವಿರುದ್ಧ ಹೊಸ ಮಿಲಿಟರಿ ಕ್ರಮ ಕೈಗೊಳ್ಳಲು ಇಸ್ರೇಲ್ ಅಂತಿಮ ನಿರ್ಧಾರ ತೆಗೆದುಕೊಂಡಿದೆ ಎಂಬುದಕ್ಕೆ ಯಾವುದೇ ಅಧಿಕೃತ ದೃಢೀಕರಣ ಇಲ್ಲದಿದ್ದರೂ ಕರೆದಿದ್ದ ಭದ್ರತಾ ಸಂಪುಟ ಸಭೆಯು ಮಧ್ಯಪ್ರಾಚ್ಯದಲ್ಲಿ ಹೆಚ್ಚಿನ ಕಳವಳವನ್ನು ಉಂಟುಮಾಡಿದೆ.