ಸಂವಿಧಾನದಿಂದ ‘ಸಮಾಜವಾದಿ’ ಮತ್ತು ‘ಜಾತ್ಯಾತೀತ’ ಪದವನ್ನು ತೆಗೆದು ಹಾಕಬೇಕು: ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ ಸುಬ್ರಮಣಿಯನ್ ಸ್ವಾಮಿ

0
428

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ: ದೇಶದ ಸಂವಿಧಾನದ ಪ್ರಸ್ತಾವನೆಯಿಂದ ‘ಸಮಾಜವಾದಿ’ ಮತ್ತು ‘ಜಾತ್ಯಾತೀತತೆ’ಎಂಬ ಎರಡು ಪದಗಳನ್ನು ತೆಗೆದು ಹಾಕಬೇಕೆಂದು ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಜಸ್ಟಿಸ್ ಇಂದಿರಾ ಬ್ಯಾನರ್ಜಿ, ಜಸ್ಟಿಸ್ ಎಂ.ಎಂ ಸುಂದರೇಶ್‍ರವರ ಪೀಠವು ಅರ್ಜಿಯನ್ನು ಸೆ.23ಕ್ಕೆ ಪರಿಗಣಿಸಲಿದೆ ಅಲ್ಲದೇ, ವಕೀಲ ಸತ್ಯ ಸಬರ್‍ವಾಲ್ ಕೂಡ ಇಂತಹ ಅರ್ಜಿಯನ್ನು ಸಲ್ಲಿಸಿದ್ದು ಅದು ಕೂಡ ಪೀಠದ ಮುಂದಿದೆ. ಇದನ್ನುಯ ಕೂಡ ಪೀಠವು ಸೆ.23ರಂದು ವಿಚಾರಣೆಗೆ ಪರಿಗಣಿಸಲಿದೆ.

ಪ್ರಧಾನಿ ಇಂದಿರಾ ಗಾಂಧಿ ಕಾಲದಲ್ಲಿ ಸಂವಿಧಾನ ತಿದ್ದುಪಡಿ ಮೂಲಕ ‘ಸಮಾಜವಾದಿ’, ‘ಜಾತ್ಯತೀತ’ ಪದವನ್ನು ಸೇರಿಸಿದ್ದು ಆರ್ಟಿಕಲ್ 368ರ ಪ್ರಕಾರ ಪಾರ್ಲಿಮೆಂಟಿಗೆ ತಿದ್ದುಪಡಿ ಅಧಿಕಾರದ ಅತೀತವಾಗಿ ಇದನ್ನು ಸೇರಿಸಲಾಗಿದೆ ಎಂದು ಅರ್ಜಿಯಲ್ಲಿ ಬೆಟ್ಟು ಮಾಡಲಾಗಿದೆ. ಪ್ರಜಾಪ್ರಭುತ್ವ ಆಡಳಿತದಲ್ಲಿ ಸಮಾಜವಾದಿ ಮತ್ತು ಜಾತ್ಯಾತೀತತೆಯ ಆಶಯಗಳನ್ನು ಮಂಡಿಸಲು ಸಂವಿಧಾನ ಶಿಲ್ಪಿಗಳು ಒಮ್ಮೆಯೂ ಉದ್ದೇಶಿಸಿರಲಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿದೆ.