ಮಣಿಪುರ: 7 ಮಂದಿ ಜೆಡಿಯು ಶಾಸಕರಲ್ಲಿ ಐವರು ಬಿಜೆಪಿಗೆ ಸೇರ್ಪಡೆ

0
276

ಸನ್ಮಾರ್ಗ ವಾರ್ತೆ

ಗುವಾಹಟಿ: ಮಣಿಪುರದ ಜೆಡಿಯುವನ್ನು ಬಿಜೆಪಿ ಒಡೆದಿದೆ. ಏಳು ಮಂದಿ ಜೆಡಿಯು ಶಾಸಕರಲ್ಲಿ ಐವರು ಆಡಳಿತ ಪಕ್ಷ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಜೆಡಿಯು ನಾಯಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಸಖ್ಯ ತೊರೆದ ವಾರಗಳಲ್ಲಿ ಮಣಿಪುರದಲ್ಲಿ ಈ ತಿರುಗೇಟನ್ನು ನಿತೀಶ್‍ ಕುಮಾರ್ ಎದುರಿಸಬೇಕಾಯಿತು.

ಐವರು ಜೆಡಿಯು ಶಾಸಕರನ್ನು ಬಿಜೆಪಿಗೆ ಸೇರ್ಪಡೆಗೊಳಿಸಲು ಸ್ಪೀಕರ್ ಅನುಮತಿ ನೀಡಿದ್ದಾರೆ ಎಂದು ವಿಧಾನಸಭಾ ಕಾರ್ಯದರ್ಶಿ ಕೆ. ಮೇಘಜಿತ್ ಸಿಂಗ್ ಹೇಳಿಕೆ ನೀಡಿದ್ದು, ಒಟ್ಟು ಏಳು ಶಾಸಕರಲ್ಲಿ ಐವರು ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಪಕ್ಷಾಂತರ ನಿಷೇಧ ಕಾನೂನು ಅನ್ವಯವಾಗುವುದಿಲ್ಲ ಎಂದಿದ್ದಾರೆ.

ಕೆ.ಎಚ್ ಜೊಯ್ ಕಿಶನ್, ಎನ್ ಸನತ್, ಎಂ.ಡಿ ಅಚಬುದ್ದೀನ್, ಮಾಜಿ ಡಿಜಿಪಿ ಎಲ್.ಎಂ ಖಟ್ಟ್, ತಂಗಜಂ ಅರುಣ್ ಕುಮಾರ್ ಜೆಡಿಯು ತೊರೆದವರು. ಎರಡನೇ ಬಾರಿ ಬಿಜೆಪಿ ನಿತೀಶ್ ಕುಮಾರ್ ಜೆಡಿಯುವಿನಿಂದ ಹೀಗೆ ಪಕ್ಷಾಂತರ ಮಾಡಿಸಿದೆ. 2020ರಲ್ಲಿ ಅರುಣಾಚಲ ಪ್ರದೇಶದಲ್ಲಿ ಜೆಡಿಯು ಶಾಸಕರನ್ನು ಬಿಜೆಪಿ ಪಕ್ಷಾಂತರ ಮಾಡಿಸಿತ್ತು.