ಕೃಷಿಕರಿಗೆ ಅವಮಾನ: ಸಚಿವ ಮಾಧುಸ್ವಾಮಿ ದುರ್ವರ್ತನೆ ಖಂಡಿಸಿದ ವೆಲ್ಫೇರ್ ಪಾರ್ಟಿ

0
450

ಸನ್ಮಾರ್ಗ ವಾರ್ತೆ

ತುಮಕೂರು: ದೇಶಕ್ಕೆ ಅನ್ನ ಕೊಡುವ ಕೃಷಿಕರ ಬಗ್ಗೆ ಉಡಾಫೆಯಾಗಿ ಮಾತನಾಡುವ ಮೂಲಕ ದುರ್ವರ್ತನೆ ತೋರಿರುವ ಸಚಿವ ಮಾಧುಸ್ವಾಮಿ ಅವರ ನಡತೆಯನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ತುಮಕೂರು ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾ ಅಧ್ಯಕ್ಷ ತಾಜುದ್ದೀನ್ ಷರೀಫ್ ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಮಧುಗಿರಿಯಲ್ಲಿ ರೈತರು ಬೆಳೆ ನಷ್ಟ ಪರಿಹಾರ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದೇ, ಸರಕಾರ ಎಲ್ಲದಕ್ಕೂ ಪರಿಹಾರ ನೀಡಲು ಆಗುವುದಿಲ್ಲ ಎಂದು ಹಗುರವಾಗಿ ಮಾತನಾಡುವ ಮೂಲಕ ಸಚಿವರು, ರೈತರಿಗೆ ಅವಮಾನ ಮಾಡಿದ್ದಾರೆ.

ಅಧಿಕಾರ ಪಡೆದುಕೊಳ್ಳಲು ರೈತರು ಬೇಕು, ಅಧಿಕಾರ ಬಂದ ಮೇಲೆ ರೈತರ ಸಮಸ್ಯೆಗಳಿಗೆ ಸ್ಪಂದನೆ ಬೇಡವೇ? ಯಾವಾಗಲೂ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಸರಕಾರವನ್ನೂ ಮುಜುಗರಕ್ಕೀಡು ಮಾಡುತ್ತಿರುವ ಮಾದುಸ್ವಾಮಿ ಅವರನ್ನು ಸಂಪುಟದಿಂದ ಕೈಬಿಡಬೇಕು. ಬೆಳೆ ನಷ್ಟ ಆಗಿರುವ ರಾಜ್ಯದ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ತಾಜುದ್ದೀನ್ ಶರೀಫ್ ಆಗ್ರಹಿಸಿದರು.