ಢಾಕ: ಹಳೆ ಢಾಕದ ಚೌಕಬಝಾರಿನಲ್ಲಿ ನಡೆದ ಅಗ್ನಿ ಅನಾಹುತದಲ್ಲಿ ಸಾವೀಗಾಡದವರಲ್ಲಿ 45 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಇನ್ನೂ 22 ಮೃತದೇಹಗಳ ಹಸ್ತಾಂತರ ಕಾರ್ಯ ನಡೆಯಬೇಕಾಗಿದೆ ಎಂದು ಸಹ ಪೊಲೀಸ್ ಆಯುಕ್ತ ಮುಹಮ್ಮದ್ ರಜಿಬುಲ್ ಇಸ್ಲಾಮ್ ಡೈಲಿ ಸ್ಟಾರ್ ನ್ಯೂಸ್ಗೆ ಇಂದು ತಿಳಿಸಿದ್ದಾರೆ.
ಡಿಎನ್ಎ ತಪಾಸಣೆಯ ಆಧಾರದಲ್ಲಿ ಕುಟುಂಬಗಳನ್ನು ಗುರುತಿಸಿ ಮೃತದೇಹಗಳನ್ನು ಒಪ್ಪಿಸಲಾಗುತ್ತಿದೆ ಎಂದು ಅವರು ತಿಳಿಸಿದರು. ಮೃತದೇಹದ ಸಂಬಂಧಿಕರನ್ನು ಗುರುತಿಸಲಿಕ್ಕಾಗಿ ಮಾಹಿತಿ ಕೇಂದ್ರವನ್ನು ಢಾಕ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತೆರೆಯಲಾಗಿದೆ. ಈ ಕೇಂದ್ರವನ್ನು ವಿಪತ್ತು ನಿರ್ವಹಣಾ ಮತ್ತು ಪರಿಹಾರ, ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಸೇವೆ ಮತ್ತು ನಾಗರಿಕ ರಕ್ಷಣಾ ಇಲಾಖೆಯು ಜಂಟಿಯಾಗಿ ನಡೆಸುತ್ತಿದೆ.
ಹಳೆ ಢಾಕ ನಗರದ ಚೌಕ ಬಝಾರಿನಲ್ಲಿ ರಾತ್ರೆ 10: 40ಕ್ಕೆ ರಾಸಾಯನಿಕ ವಸ್ತುಗಳ ಗೋದಾಮಿಗೆ ಬೆಂಕಿ ಹೊತ್ತಿಕೊಂಡು 70 ಮಂದಿ ಮೃತಪಟ್ಟಿದ್ದರು.












