ದುಬೈ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಬಿಸಿಸಿಐ ನಾಯಕರು ಮತ್ತು ದ.ಕನ್ನಡ ವಕ್ಫ್ ಸಲಹಾ ಮಂಡಳಿ ಪ್ರತಿನಿಧಿಗಳಿಗೆ ಸನ್ಮಾನ

0
273

ಸನ್ಮಾರ್ಗ ವಾರ್ತೆ

ದುಬೈಯ ಪ್ರತಿಷ್ಟಿತ ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ಇತ್ತೀಚೆಗೆ ದುಬೈಗೆ ಭೇಟಿ ನೀಡಿದ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಮಂಡಳಿ(ಬಿಸಿಸಿಐ) ನಾಯಕರನ್ನು ಮತ್ತು ದಕ್ಷಿಣ ಕನ್ನಡ ವಕ್ಫ್ ಸಲಹಾ ಮಂಡಳಿ ಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.

ದುಬೈಯ ಇಬ್ರಾಹಿಮಿ ಪ್ಯಾಲೇಸ್ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಈ ಸನ್ಮಾನ ಸಮಾರಂಭದ ಅಧ್ಯಕ್ಷತೆಯನ್ನು ಬಿಸಿಎಫ್ ಅಧ್ಯಕ್ಷರಾದ ಡಾ.ಬಿ.ಕೆ. ಯೂಸುಫ್‌ರವರು ವಹಿಸಿದ್ದರು. ಈ ಕಾರ್ಯಕ್ರಮವನ್ನು ಡಾ ಬಿ ಕೆ ಯೂಸುಫ್ ರವರ ಪ್ರಾಯೋಜಕತ್ವದಲ್ಲಿ ನಡೆಸಲಾಯಿತು.

ಬಿಸಿಸಿಐ ದುಬೈಯ ಅಧ್ಯಕ್ಷರಾದ ಎಸ್.ಎಂ ಬಶೀರ್‌ರವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ದುಬೈಗೆ ಆಗಮಿಸಿದ ಬಿಸಿಸಿಐ ಮತ್ತು ವಕ್ಸ್ ಸಲಹಾ ಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದ ಈ ಸನ್ಮಾನ ಸಮಾರಂಭದಲ್ಲಿ ಬಿಸಿಸಿಐ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜನಾಬ್ ಎಸ್.ಎಂ.ರಶೀದ್ ಹಾಜಿಯವರ ಮುಂದಾಳುತ್ವದಲ್ಲಿ ಇತರ ಪದಾಧಿಕಾರಿಗಳೂ ನಾಯಕರೂ ಒಳಗೊಂಡಂತೆ ಬಿ.ಎಂ ಮುಮ್ರಾಜ್ ಅಲಿ, ಯು.ಟಿ ಇಫ್ತಿಕಾರ್, ಆಸೀಫ್, ವಕ್ಫ್ ಮಂಡಳಿಯ ಪ್ರತಿನಿಧಿ ನಾಸೀರ್ ಲಕ್ಕಿ ಸ್ಟಾರ್, ಬಿಡಬ್ಯೂಎಫ್ ಅಧ್ಯಕ್ಷರಾದ ಮುಹಮ್ಮದ್ ಅಲಿ ಉಚ್ಚಿಲ್, ಹಿದಾಯತ್ ಅಡೂರು, ಹಂಝ ಕನ್ನಂಗಾರ್, ಬಿಸಿಎಫ್ ನಾಯಕರಾದ ಅಬೂಸಾಲಿಹ್, ಇಬ್ರಾಹಿಂ ಗಡಿಯಾರ್, ಸಫ್ವಾನ್, ಅಷ್ಫಾಕ್ ಸಾದಾ, ಮೊದಲಾದ ಗಣ್ಯರು ಉಪಸ್ಥಿತರಿದ್ದರು.

ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಕಾಪು ಮಹಮ್ಮದ್‌ರವರು ಬಿಸಿಎಫ್‌ನ ಪ್ರಾಥಮಿಕ ಪರಿಚಯ ನೀಡುತ್ತಾ, ಬಿಸಿಸಿಐ ದುಬೈ ಅಧ್ಯಕ್ಷರಾದ ಎಸ್.ಎಂ ಬಶೀರ್‌ರವರ ಪುತ್ರಿ ಮತ್ತು ಅಳಿಯನಿಗೆ ಶುಭ ಕೋರಿದರು. ಮತ್ತು ಸೇರಿದ ಅತಿಥಿಗಳ ಪರಿಚಯ ನೀಡಿ ಸರ್ವರನ್ನು ಬಿಸಿಎಫ್ ಪರವಾಗಿ ಸ್ವಾಗತಿಸಿದರು. ಬಿಸಿಎಫ್ ಉಪಾಧ್ಯಕ್ಷರಾದ ಜನಾಬ್ ಎಂ.ಈ ಮೂಳೂರುರವರು ಬಿಸಿಎಫ್ ಸಾಧನೆಗಳನ್ನು ವಿವರಿಸುತ್ತಾ ಸಮಾಜದ ಉನ್ನತಿಗೆ ಅಗತ್ಯವಾದ 3 ಅಂಶಗಳಲ್ಲಿ 2 ಅಂಶಗಳು ನಮ್ಮಲ್ಲಿ ಧಾರಾಳ ಇದೆ. ಒಗ್ಗಟ್ಟು ನಮ್ಮ ರಕ್ತದಲ್ಲಿ ಇದೆ ಮತ್ತು ಅದನ್ನು ಪಾಲಿಸುತ್ತಿದ್ದೇವೆ. ಆದರೆ ಎಲ್ಲಾ ಸಂಸ್ಥೆಗಳು ಒಂದೇ ವೇದಿಕೆಯಲ್ಲಿ ಸೇರಿ ಸಮಾಜದ ಒಳಿತಿಗಾಗಿ ಒಂದು ಏಕೀಕೃತ ಸೇವಾ ಕಾರ್ಯ ಮಾಡುವಲ್ಲಿ ನಾವು ಸಂಪೂರ್ಣ ಸೋತಿದ್ದೇವೆ ಎಂಬ ಸತ್ಯವನ್ನು ಮಾರ್ಮಿಕವಾಗಿ ಹೇಳಿದರು.

ಸಭಾಧ್ಯಕ್ಷರಾದ ಡಾ ಬಿ .ಕೆ ಯೂಸುಫ್ ರವರು ಬಿಸಿಎಫ್‌ನ ಈ ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲ ಅತಿಥಿಗಳಿಗೆ ಹಾರ್ದಿಕವಾಗಿ ಧನ್ಯವಾದ ಹೇಳಿದರು ಮತ್ತು ಬಿಸಿಎಫ್‌ನ ಕಾರ್ಯ ವೈಖರಿ,ಧೇಯ್ಯ, ಸಾಧನೆಗಳತ್ತ ಬೆಳಕು ಚೆಲ್ಲಿದರು. ಬಿಸಿಎಫ್‌ ಉಪಾಧ್ಯಕ್ಷರಾದ ಅಬ್ದುಲ್ ಲತೀಫ್ ಮುಲ್ಕಿಯವರು ಪ್ರಾಸ್ತಾವಿಕ ಮಾತನ್ನಾಡುತ್ತಾ ಬಿಸಿಎಫ್‌‌ನ ಕಿರು ಪರಿಚಯದೊಂದಿಗೆ ಬಿಸಿಎಫ್‌ ಸಾಧನೆಗಳ ಬಗ್ಗೆ ವಿವರಿಸಿದರು. ಬಿಸಿಸಿಐ ಅಧ್ಯಕ್ಷರಾದ ಎಸ್.ಎಂ ರಶೀದ್ ರವರು ಬಿಸಿಸಿಐನ ಕಾರ್ಯ ಸಾಧನೆಗಳ ಬಗ್ಗೆ ಮಾತನಾಡಿದರು ಮತ್ತು ನಮ್ಮ ಸಮುದಾಯದಲ್ಲಿ ಒಗ್ಗಟ್ಟು ಅಗತ್ಯ ಎಂದು ಒತ್ತಿ ಹೇಳಿದರು. ನಂತರ ಎಂ.ಮುಂತಾಜ್ ಅಲಿ, ಯು ಟಿ ಇಫ್ತಿಕಾರ್, ನಾಸರ್ ಲಕ್ಕಿಸ್ಟಾರ್, ಮಹಮ್ಮದ್ ಅಲಿ ಉಚ್ಚಿಲ್ ಮೊದಲಾದ ಅತಿಥಿಗಳು ಸಮಯೋಚಿತವಾಗಿ ಮಾತಾಡಿದರು.

ಈ ಸಂಧರ್ಭದಲ್ಲಿ ಬಿಸಿಸಿಐನ ಅಧ್ಯಕ್ಷರು ಮತ್ತು ಇತರ ನಾಯಕರನ್ನು ಹಾಗೂ ಜನಾಬ್ ಅಬು ಸಾಲಿಹ್ ಅವರನ್ನು ಬಿಸಿಎಫ್ ಪರವಾಗಿ ಸನ್ಮಾನಿಸಲಾಯಿತು. ಬಿಸಿಎಫ್‌ನ ಸದಸ್ಯರು ಮತ್ತು ಮಹಿಳಾ ವಿಭಾಗದ ಸದಸ್ಯರು ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಅಫೀಕ್ ಹುಸೈನ್‌ರವರು ಧನ್ಯವಾದವಿತ್ತರು