ಮಂಗಳೂರು: ಇಂದಿನಿಂದ 4 ದಿನಗಳ ಆಧಾರ್‌ ನೋಂದಣಿ ಹಾಗೂ ತಿದ್ದುಪಡಿ ಮಹಾ ಮೇಳ

0
424

ಸನ್ಮಾರ್ಗ ವಾರ್ತೆ

ಮಂಗಳೂರು: ಆಧಾರ್‌ ಸೇವಾ ಕೇಂದ್ರ, ಮಂಗಳೂರು ಮತ್ತು ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಇದರ ಜಂಟಿ ಆಶ್ರಯದಲ್ಲಿ, ಇವತ್ತಿನಿಂದ ಅಕ್ಟೋಬರ್ 13ರ ಗುರುವಾರ ತನಕ, ಪ್ರತಿದಿನ ಬೆಳಿಗ್ಗೆ ಗಂಟೆ 10ರಿಂದ ಅಪರಾಹ್ನ 3ಗಂಟೆ ತನಕ, ಹೊಸ ಆಧಾರ್‌ ಕಾರ್ಡ್‌ ನೋಂದಣಿ ಮತ್ತು ತಿದ್ದುಪಡಿ ಶಿಬಿರ ನಗರದ ಕುದ್ರೋಳಿಯ ಬ್ರೈಟ್ ಮೋಡೆಲ್‌ ಸ್ಕೂಲ್‌ನ ಹಾಲ್‌ನಲ್ಲಿ ನಡೆಯಲಿರುವುದು.

  • ಹೊಸ ನೋಂದಣಿ
  • ವಿಳಾಸ ಬದಲಾವಣೆ
  • ಹೆಸರು ಬದಲಾವಣೆ
  • ಮೊಬೈಲ್ ನಂಬರ್‌ ತಿದ್ದುಪಡಿ
  • ಜನ್ಮದಿನಾಂಕ ತಿದ್ದುಪಡಿ
  • ಬಯೋಮೆಟ್ರಿಕ್‌

ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು. 📞 8722760795, 8073657693