ಪಾಕಿಸ್ತಾನದ ವಿರುದ್ಧ ಕಾರ್ಯಾಚರಣೆ; ಪಂಜಾಬಿನಲ್ಲಿ ಹೈ ಅಲರ್ಟ್

0
1054

ಜಲಂಧರ್: ಪಾಕಿಸ್ತಾನದಲ್ಲಿ ಭಾರತ ವಾಯುಸೇನೆಯ ಕಾರ್ಯಾಚರಣೆಯ ಬಳಿಕ ಪಂಜಾಬಿನಲ್ಲಿ ಹೈ ಅಲರ್ಟ್ ಜಾರಿಗೊಳಿಸಲಾಗಿದೆ. ವಾಯುಸೇನೆಯ ಮೂಲಗಳ ಪ್ರಕಾರ ಭಾರತೀಯ ವಾಯುಸೇನೆಯ ವಿಮಾನಗಳು ಪಂಜಾಬಿನ ಆದಮ್‍ಪುರದಿಂದ ಕಾರ್ಯಾಚರಣೆ ನಡೆಸಿತ್ತು.

ಪೂಲ್ವಾಮದಲ್ಲಾದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನೆಲಯೂರಿದೆ. ಇದರ ನಡುವೆ ಪಾಕಿಸ್ತಾನದ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಸಿದೆ. ವಾಯುಸೇನೆಯ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಜೈಶ್ ಮುಹಮ್ಮದ್‍ನ ಕೇಂದ್ರಗಳಲ್ಲಿ ದಾಳಿನಡೆಸಿವೆ. ಈ ಕಾರ್ಯಾಚರಣೆಯಲ್ಲಿ 200ರಿಂದ 300ರಷ್ಟು ಭಯೋತ್ಪಾದಕರು ಮೃತಪಟ್ಟಿದ್ದಾರೆ.

ಟಿವಿ ವರದಿಯ ಪ್ರಕಾರ ಪಿಒಕೆಯ ಬಾಲಾಕೋಟ್, ಚಕೊಟಿಯಲ್ಲಿ ಭಯೋತ್ಪಾದರ ನೆಲೆ ಮತ್ತು ಜೈಶ್‍ಮುಹಮ್ಮದ್‍ನ ಅಲ್ಫಾ -3 ಕಂಟ್ರೋಲ್ ರೂಮನ್ನು ನಾಶಪಡಿಸಿದೆ. ಭಯೋತ್ಪಾದಕ ಶಿಬಿರಗಳಲ್ಲಿ ಸಾವಿರ ಕಿಲೋದಷ್ಟು ಬಾಂಬು ಸುರಿಸಲಾಗಿದೆ. ಐಎಎಫ್ ಮೂಲಗಳ ಪ್ರಕಾರ ಇಂದು ಬೆಳಗ್ಗೆ 3:30ಕ್ಕೆ ಹತ್ತು ಮಿರಾಜ್ 2000 ಫೈಟರ್ ಜೆಟ್ ಗಡಿಯ ಭಯೋತ್ಪಾದಕರ ಶಿಬಿರಗಳನ್ನು ನಾಶಪಡಿಸಿದೆ.

ಅತ್ತ ಪಾಕಿಸ್ತಾನ ಕೂಡಾ ಭಾರತದ ವಾಯುಸೇನೆ ವಿಮಾನಗಳು ಭಾರತ-ಪಾಕ್ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಪಾಕಿಸ್ತಾನದ ಗಡಿಯಲ್ಲಿ ನುಸುಳಲು ಯತ್ನಿಸಿವೆ ಎಂದು ಹೇಳಿಕೊಂಡಿದೆ.