“ಕುರ್‌ಆನಿನೆಡೆಗೆ ಮರಳಿರಿ” ರಾಷ್ಟ್ರೀಯ ಅಭಿಯಾನ: ಅ.28ರಂದು ಸಾರ್ವಜನಿಕ ಕಾರ್ಯಕ್ರಮ

0
474

ಸನ್ಮಾರ್ಗ ವಾರ್ತೆ

ಮಂಗಳೂರು: ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಹಮ್ಮಿಕೊಳ್ಳಲಾಗಿರುವ “ಕುರ್‌ಆನಿನೆಡೆಗೆ ಮರಳಿರಿ” ರಾಷ್ಟ್ರೀಯ ಅಭಿಯಾನದ ಪ್ರಯುಕ್ತ ಅ.28ರಂದು ಸಾರ್ವಜನಿಕ ಕಾರ್ಯಕ್ರಮ‌ವನ್ನು ಉಳ್ಳಾಲ ಜಮಾಅತೆ ಇಸ್ಲಾಮೀ ಹಿಂದ್ ಘಟಕವು ಹಮ್ಮಿಕೊಂಡಿದೆ.

ಅಕ್ಟೋಬರ್ 28ರ ಶುಕ್ರವಾರ ಸಂಜೆ 7 ಗಂಟೆಗೆ ಅಕ್ಕರೆಕೆರೆಯ ಬಿ.ಹೆಚ್.ಗ್ರೌಂಡ್‌ನಲ್ಲಿ ಸಾರ್ವಜನಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ.

ಬೋಳಂಗಡಿ ಹವ್ವಾ ಜುಮಾ ಮಸೀದಿಯ ಖತೀಬರಾದ ಮೌಲಾನ ಯಹ್ಯಾ ತಂಙಳ್ ಮದನಿ‌ಯವರು “ಪ್ರವಾದಿ ಮುಹಮ್ಮದ್(ಸ)ರವರನ್ನು ಅರಿಯಿರಿ” ಎಂಬ ವಿಷಯದಲ್ಲಿ ಮಾತನಾಡಲಿದ್ದಾರೆ. ಹಾಗೂ ತೊಕ್ಕೊಟ್ಟು ಮಸ್ಜಿದುಲ್ ಹುದಾ ಖತೀಬರಾದ ಮುಹಮ್ಮದ್ ಕುಂಞಿಯವರು ಕು‌ರ್‌ಆನಿನೆಡೆಗೆ ಮರಳಿರಿ ಎಂಬ ವಿಷಯದಲ್ಲಿ ಸಾರ್ವಜನಿಕ ಪ್ರವಚನ ನೀಡಲಿದ್ದಾರೆ.