ಇಸ್ರೇಲ್ ಸೇನಾ ದಾಳಿಗೆ 6 ಮಂದಿ ಫೇಲ್ತೆನಿಯರು ಬಲಿ, ಹಲವರಿಗೆ ಗಾಯ

0
443

ಸನ್ಮಾರ್ಗ ವಾರ್ತೆ

ಆಕ್ರಮಿತ ಪಶ್ಚಿಮ ದಂಡೆಯ ಮೇಲೆ ಮಂಗಳವಾರ ಮುಂಜಾನೆ ದಾಳಿ ಮಾಡಿದ ಇಸ್ರೇಲಿ ಯೋಧರು 6ಮಂದಿ ಫೇಲೆಸ್ತೀನಿಯರನ್ನು ಹತ್ಯೆಗೈದಿರುವುದಲ್ಲದೆ 20 ಮಂದಿಯನ್ನು ಗಾಯಗೊಳಿಸಿದ್ದಾರೆ ಎಂದು ಫೇಲೆಸ್ತೀನ್ ಆರೋಗ್ಯ ಸಚಿವರು ಹೇಳಿದ್ದಾರೆ. ಆದರೆ, ಉಗ್ರವಾದಿಗಳು ಅಲ್ಲಿ ಅಡಗಿದ್ದರು ಎಂದು ಇಸ್ರೇಲ್‌ನ ಪ್ರಧಾನಿ ಯಾಸಿರ್ ಲುಪಿಡ್ ದಾಳಿಯನ್ನು ಸಮರ್ಥಿಸಿಕೊಂಡಿದ್ದಾರೆ.

ಪೊಲೀಸರು ಮತ್ತು ಗುಪ್ತಚರ ಏಜೆನ್ಸಿಗಳನ್ನು ಸೇರಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಪಶ್ಚಿಮ ದಂಡೆಯನ್ನು ಇಸ್ರೇಲ್ ಆಕ್ರಮಿಸಿದ ಬಳಿಕ ಭಾರಿ ದೊಡ್ಡ ಪ್ರಮಾಣದಲ್ಲಿ ಇತ್ತೀಚಿನ ದಿನಗಳಲ್ಲಿ ಇಲ್ಲಿ ಘರ್ಷಣೆಗಳು ಮುಂದುವರಿಯುತ್ತಿವೆ.

ಈ ವರ್ಷದ ಆರಂಭದಿಂದ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೆಮ್‌ನಲ್ಲಿ 129 ಫೇಲೆಸ್ತೀನೀ ನಾಗರಿಕರನ್ನು ಇಸ್ರೇಲ್ ಸೇನೆ ಹತ್ಯೆಗೈದಿದ್ದು ಮೃತರಲ್ಲಿ ಯಾವುದೇ ಆಯುಧಗಳಿರಲಿಲ್ಲ. ಕಳೆದ 7 ವರ್ಷಗಳಲ್ಲೇ ಇದು ಅತ್ಯಧಿಕ ಎಂದು ವಿಶ್ವಸಂಸ್ಥೆ ಹೇಳಿದೆ.