ಸಬ್ಸಿಡಿ ಅಡುಗೆ ಅನಿಲಕ್ಕೂ ತಟ್ಟಿದ ಬೆಲೆ ಏರಿಕೆಯ ಬಿಸಿ

0
714

ಹೊಸದಿಲ್ಲಿ,ಮಾ.1: ದೇಶದಲ್ಲಿ ಸಬ್ಸಿಡಿ ಅಡುಗೆ ಅನಿಲಕ್ಕೆ ಬೆಲೆಹೆಚ್ಚಳವಾಗಿದೆ. ಸಬ್ಸಿಡಿ ಅಡುಗೆ ಅನಿಲಕ್ಕೆ 2.08 ರೂಪಾಯಿ ಹೆಚ್ಚಳ ಸಂಭವಿಸಿದರೆ, ಸಬ್ಸಿಡಿಯಿಲ್ಲದ ಅಡುಗೆ ಅನಿಲಕ್ಕೆ 42.50 ರೂಪಾಯಿ ಹೆಚ್ಚಿಸಲಾಗಿದೆ. ಕಳೆದ ಮೂರು ತಿಂಗಳ ಹಿಂದೆ ಸರಕಾರ ದರ ಕಡಿಮೆ ಮಾಡಿತ್ತು. ಈಗ ಪುನಃ ಅಡುಗೆ ಅನಿಲಕ್ಕೆ ಬೆಲೆಯೇರಿಕೆಯಾಗಿದೆ.

14.2 ಕಿಲೋ ಗ್ರಾಮ್‌ನ ಸಬ್ಸಿಡಿ ಅನಿಲ ಸಿಲಿಂಡರಿಗೆ ದಿಲ್ಲಿಯಲಿ 495.61 ರೂಪಾಯಿ ದರವಾಗಿದೆ. ಈ ಹಿಂದೆ 493.53 ರೂಪಾಯಿ ಬೆಲೆಯಿತ್ತು. ಸಬ್ಸಿಡಿರಹಿತ ಸಿಲಿಂಡರಿಗೆ 701.50 ರೂಪಾಯಿ ದರ ನಿಗದಿಯಾಗಿದೆ. ದೇಶದ ಎಲ್ಲ ಕುಟುಂಬಗಳಿಗೆ ಪ್ರತಿವರ್ಷ ಸಬ್ಸಿಡಿಯ 12 ಸಿಲಿಂಡರ್‍ಗಳನ್ನು ಕೇಂದ್ರ ಸರಕಾರ ನೀಡುತ್ತಿದೆ. ಸಬ್ಸಿಡಿ ಹಣವನ್ನು ಬಳಕೆದಾರರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತಿದೆ.