ಸನ್ಮಾರ್ಗ ವಾರ್ತೆ
ಬೋಳಂಗಡಿ: ಇಲ್ಲಿನ ಅಮ್ಮ ಸ್ವೀಟ್ಸ್ ಸೇವಾ ಟ್ರಸ್ಟ್ ಇದರ ಆಶ್ರಯದಲ್ಲಿ ಸಮಾಜದ ಅಶಕ್ತರಿಗೆ ಗಾಲಿ ಕುರ್ಚಿ ಮತ್ತು ವಿಕಲ ಚೇತನ ಮಕ್ಕಳಿಗೆ ಸಹಾಯಧನ ವಿತರಣಾ ಕಾರ್ಯಕ್ರಮವು ಇಲ್ಲಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ವಟಾರದಲ್ಲಿಜನವರಿ ಒಂದರAದು ಜರಗಿತು. ಅಮ್ಮ ಸ್ವೀಟ್ಸ್ ಇದರ ಹದಿನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಪ್ರತೀವರ್ಷದಂತೆ ಈ ವರ್ಷವೂ ಬಡ ಅಶಕ್ತರಿಗೆ ನೆರವಾಗುವ ಸಮಾಜ ಸೇವಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ತಮ್ಮ ವ್ಯಾಪಾರದ ಉಳಿತಾಯದ ಹಣದಲ್ಲಿ ಪ್ರತೀ ದಿನ ಕೂಡಿಟ್ಟ ನಿರ್ದಿಷ್ಟ ಹಣದ ಮೂಲಕ ವರ್ಷದ ಕೊನೆಯಲ್ಲಿ ಮಾಲಕ ಜನಾರ್ಧನ ಪೂಜಾರಿಯವರು ಈ ಸಮಾಜ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ. ಕಾರ್ಯಕ್ರಮವನ್ನು ಬಂಟ್ವಾಳ ಠಾಣೆಯ ಸಹ ಉಪನಿರೀಕ್ಷಕ ಜಿನ್ನಪ್ಪ ಗೌಡ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಯುವಸಂಗಮ ಮೆಲ್ಕಾರ್ ಇದರ ಗೌರವಾಧ್ಯಕ್ಷ ಎಮ್.ಎನ್, ಕುಮಾರ್ ವಹಿಸಿ ಸಮಾಜಮುಖಿ ಕಾರ್ಯದ ಬಗ್ಗೆ ಪ್ರಸ್ತಾಪಿಸಿ ಇದು ಎಲ್ಲರಿಗೂ ಮಾದರೀ ಕಾರ್ಯಕ್ರಮವೆಂದು ಹೇಳಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸುರೇಖಾ ಯಳವಾರ್ (ಶಿಕ್ಷಣ ಇಲಾಖೆಯ ಸಮನ್ವಯ ಅಧಿಕಾರಿ), ಹಿತವಚನಗಳನ್ನು ನೀಡಿದರು. ವೇದಿಕೆಯಲ್ಲಿ ಅಮ್ಟಾಡಿ ವಿಕಲ ಚೇತನ ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಪ್ರಕಾಶ್ ಎಂ.ಪಿ, ಮಾಜಿ ಪುರಸಭಾ ಸದಸ್ಯ ಜನಾರ್ಧನ ಕುಲಾಲ್ ಉಪಸ್ಥಿತರಿದ್ದರು. ಶಿಕ್ಷಕಿ ರೇಖಾ ಗಿರೀಶ್(ಮುಖ್ಯ ಶಿಕ್ಷಕಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೊಂಡಾಲ) ರವರನ್ನು ಸನ್ಮಾನಿಸಲಾಯಿತು. ಬಳಿಕ ಅಶಕ್ತರಿಗೆ ಗಾಲಿಕಕುರ್ಚಿ ಮತ್ತು ವಿಕಲ ಚೇತನ ಮಕ್ಕಳಿಗೆ ಸಹಾಯ ಧನ ವಿತರಿಸಲಾಯಿತು. ಅಮ್ಮ ಸ್ವೀಟ್ಸ್ ಮಾಲಕ ಜನಾರ್ಧನ ಪೂಜಾರಿ ತಮ್ಮ ಅನಿಸಿಕೆ ಮಂಡಿಸಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಕಿ ರೇಖಾ ಗಿರೀಶ್ ಪ್ರಾರ್ಥನಾಗೀತೆ ಹಾಡಿದರು. ಶಿಕ್ಷಕಿ ವಸಂತಿ ಗಂಗಾದರ್ ಸ್ವಾಗತಿಸಿದರೆ ಉದ್ಯಮಿ ಎಂ.ಎಚ್ ಮುಸ್ತಫಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪತ್ರಕರ್ತ ಸಲೀಮ್ ಬೋಳಂಗಡಿ ಧನ್ಯವಾದವಿತ್ತರು. ಮನೋಜ್ ವಾಮಂಜೂರ್ ಕಾರ್ಯಕ್ರಮ ನಿರೂಪಿಸಿದರು.













