ಸನ್ಮಾರ್ಗ ವಾರ್ತೆ
ಬೆಂಗಳೂರು: ಪಂಚಮಸಾಲಿ ಮೀಸಲಾತಿ ಕುರಿತಂತೆ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟವು ಬಿಜೆಪಿ ನಾಯಕರ ನಡುವಿನ ವಾಕ್ ಯುದ್ಧಕ್ಕೆ ಕಾರಣವಾಗಿದೆ. ಅದರಲ್ಲೂ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಚಿವ ಮುರುಗೇಶ್ ನಿರಾಣಿ ಮಧ್ಯೆ ಮಾತಿನ ಸಮರ ನಡೆಯುತ್ತಿದೆ. ಇಬ್ಬರು ನಾಯಕರು ಕೀಳುಮಟ್ಟದ ಪದ ಬಳಸಿ ಪರಸ್ಪರ ಬೈದಾಡಿಕೊಳ್ಳುತ್ತಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ನಮ್ಮ ಸರ್ಕಾರದಲ್ಲಿ ಪಿಂಪ್ ಮಂತ್ರಿ ಇದ್ದಾನೆ ಅವನು ಆ ಕೆಲಸ ಮಾಡ್ತಾನೆ. ನಮಗೆ ಎಲ್ಲರೂ ಮೋಸ ಮಾಡಿಕೊಂಡೆ ಬಂದಿದ್ದಾರೆ. ಮಾತು ಕೊಡ್ತಾರೆ ಮತ್ತೆ ಮಾತು ತಪ್ಪುತ್ತಾರೆ. ಇತಿಹಾಸದಲ್ಲಿ ನಾನು ಇಂತಹ ಮುಖ್ಯಮಂತ್ರಿ ನೋಡಿಯೇ ಇಲ್ಲಾ. ಸ್ಪೇಷಲ್ ಹ್ಯೂಮನ್ ಮುಖ್ಯಮಂತ್ರಿ ನೋಡಿಯೇ ಇಲ್ಲ. ನಾನು ಪಕ್ಷದ ವಿರುದ್ಧ ಮಾತಾಡಿದರೆ ಕ್ರಮ ತಗೊತಿಯಾ? ಈ ಮೊದಲು ನಿಂದು ನೋಡಿಕೋ, ನಿನ್ನಂತೆ ಹಲ್ಕಾ ಕೆಲಸ ಮಾಡೋನು ನಾನಲ್ಲ. ಚಿಲ್ಲರೆ ಕೆಲಸ ಮಾಡೋನು ನಾನಲ್ಲಾ, ನಿಮ್ಮ ಅಪ್ಪಂಗೆ ಹುಟ್ಟಿದರೆ ತೆಗಿಯೋ. ಬಿಜಾಪುರದಲ್ಲಿ ಬಂದು ಪ್ರೆಸ್ ಮೀಟ್ ಮಾಡಿ ಹೇಳು. ಬಾರೋ ನೋಡೋಣಾ, ಧಮ್ ಇದ್ರೆ ಅಖಾಡಕ್ಕೆ ಇಳಿಯಬೇಕು, ರೊಕ್ಕ ಇದೆ ಅಂತಾ ಅಡ್ಡಾಡಿದ್ರೆ ಅಷ್ಟೇ. ಈ ಮುಖ್ಯಮಂತ್ರಿಯ ಮೇಲೆ ನಮಗೆ ಭರವಸೆ ಇಲ್ಲ. ನಿಮ್ಮ ಬಳಿನೂ ಬರೋದಿಲ್ಲ, ನಾವು ದೆಹಲಿ ಚಲೋ ಹಮ್ಮಿಕೊಳ್ತಾ ಇದ್ದೇವೆ. ಕೇಂದ್ರದಲ್ಲಿ ಮೋದಿಯವರನ್ನು ಭೇಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ” ಎಂದು ಎಚ್ಚರಿಕೆ ನೀಡಿದರು.
ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಮುರುಗೇಶ್ ನಿರಾಣಿ, “ಯಾರಿಗೋ ಹುಟ್ಟಿದವರು ಹೀಗೆ ಮಾತನಾಡುತ್ತಾರೆ. ದೀಪ ಆರುವ ಮುನ್ನ ಜೋರಾಗಿ ಉರಿಯುತ್ತದೆ” ಎಂದು ಹೇಳಿದ್ದಾರೆ. “ನಿಮ್ಮ ಜೊತೆ ಕುಮಾರ್ ಎಂಬ ಡ್ರೈವರ್ ಇದ್ದ. ಆ ಡ್ರೈವರ್ ಯಾಕೆ ಕೊಲೆಯಾದ ?ಅವನನ್ನು ಕೊಲೆ ಮಾಡಿದ್ಯಾರು?” ಎಂಬ ಸತ್ಯವನ್ನು ಹೇಳಿ ಎಂದು ಯತ್ನಾಳ್ಗೆ ನಿರಾಣಿ ಸವಾಲ್ ಹಾಕಿದ್ದಾರೆ.












