ಹೊಸದಿಲ್ಲಿ, ಫೆ.5: ಪುಲ್ವಾಮದಲ್ಲಿ ಅವಗಢ ಸಂಭವಿಸಿತು ಎಂದು ಹೇಳಿದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ರಿಗೆ ಕೇಂದ್ರ ಸಚಿವ ವಿ ಕೆ ಸಿಂಗ್ ಪ್ರತ್ಯುತ್ತರ ನೀಡಿದ್ದಾರೆ.
ಭಯೋತ್ಪಾದನಾ ದಾಳಿಯನ್ನು ಅವಗಡ ಎಂದು ವಿಶ್ಲೇಷಿಸಿ ರಾಜಕೀಕರಣ ಗೊಳಿಸುವುದು ಸರಿಯಲ್ಲ. ರಾಜೀವ್ ಗಾಂಧಿ ಹತ್ಯೆ ಅವಗಢ ಎಂದು ದಿಗ್ವಿಜಯ್ ಸಿಂಗ್ ವಿಶ್ಲೇಷಿಸುತ್ತಾರೆಯೇ ಎಂದು ವಿ ಕೆ ಸಿಂಗ್ ಟ್ವಿಟರಲ್ಲಿ ಪ್ರಶ್ನಿಸಿದರು.
ದೇಶಕ್ಕಾಗಿ ಸೇವೆ ಸಲ್ಲಿಸುವ ಸೈನಿಕರ ಆತ್ಮವಿಶ್ವಾಸಕ್ಕೆ ಇಂತಹ ಪ್ರಶ್ನೆಯೆತ್ತುವ ಮೂಲಕ ಧಕ್ಕೆ ಒದಗಿಸಬಾರದೆಂದು ಸಿಂಗ್ ಹೇಳಿದರು.
ಟ್ವಿಟರಲ್ಲಿ ದಿಗ್ವಿಜಯ್ ಸಿಂಗ್ ಪುಲ್ವಾಮ ಭಯೋತ್ಪಾದನಾ ದಾಳಿಯ ಕುರಿತು ಹೇಳಿಕೆ ನೀಡಿದ್ದರು. ಪುಲ್ವಾಮದಲ್ಲಿ ಅವಗಢ ಆಗಿದೆ. ಬಾಲಕೋಟೆ ವಾಯು ದಾಳಿಯ ಕುರಿತು ಕೂಡ ವಿದೇಶಿ ಮಾಧ್ಯಮಗಳು ಶಂಕೆ ವ್ಯಕ್ತಪಡಿಸಿವೆ. ಇದಕ್ಕೆ ಸರಕಾರ ಉತ್ತರಿಸಬೇಕಾಗಿದೆ ಎಂದು ದಿಗ್ವಿಜಯ್ ಸಿಂಗ್ ಟ್ವಿಟರ್ ಮೂಲಕ ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.












