ಸಿಸೇರಿಯನ್ ಹೆರಿಗೆಗೆ ಆಸ್ಪತ್ರೆಗಳು ಒತ್ತು ಕೊಡುತ್ತಿವೆಯೇ?: ವಿಶ್ವ ಆರೋಗ್ಯ ಸಂಸ್ಥೆ ವರದಿ ಹೀಗಿದೆ

0
271

ಸನ್ಮಾರ್ಗ ವಾರ್ತೆ

ಶಿಲ್ಲಾಂಗ್: ಆಸ್ಪತ್ರೆಗಳು ಸಿಸೇರಿಯನ್ ಹೆರಿಗೆಯನ್ನು ಬಯಸುತ್ತವೆ ಮತ್ತು ಸಹಜ ಹೆರಿಗೆಯನ್ನು ಸಿಸೇರಿಯನ್ ಹೆರಿಗೆಯಾಗಿ ಮಾರ್ಪಡಿಸುತ್ತವೆ ಎಂಬ ಜನಸಾಮಾನ್ಯರ ಆರೋಪವನ್ನು ಸಮರ್ಥಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ವರದಿಯೊಂದನ್ನು ಬಿಡುಗಡೆಗೊಳಿಸಿದೆ. 2022 ರಲ್ಲಿ ದೇಶದಲ್ಲಿ ನಡೆದ ಹೆರಿಗೆಗಳ ಪೈಕಿ 53 ಶೇಕಡ ಕೂಡ ಸಿಸೇರಿಯನ್ ಹೆರಿಗೆಯಾಗಿತ್ತು ಮತ್ತು ಕೇವಲ 15 ಶೇಕಡ ಹೆರಿಗೆಗಳು ಮಾತ್ರ ಸಹಜ ಹೆರಿಗೆಗಳಾಗಿದ್ದುವು ಎಂದು ವರದಿಯಲ್ಲಿ ಹೇಳಲಾಗಿದೆ.

ಹಾಗೆಯೇ ಜಾಗತಿಕವಾಗಿಯೂ ಸಿಸೇರಿಯನ್ ಹೆರಿಗೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಕೂಡ ವರದಿಯಲ್ಲಿ ತಿಳಿಸಲಾಗಿದೆ. 2021ರಲ್ಲಿ ಭಾರತದಲ್ಲಿ 47.64 ಶೇಕಡ ಸಿಸೇರಿಯನ್ ಹೆರಿಗೆಗಳು ನಡೆದಿತ್ತು ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಂಸ್ಥೆಯು ಹೇಳಿತ್ತು. 2022 ರಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ನಡೆದ ಹೆರಿಗೆಗಳಲ್ಲಿ 15 ಶೇಕಡ ಮಾತ್ರ ಸಿಸೇರಿಯನ್ ಹೆರಿಗೆಗಳಾಗಿತ್ತು. ಅದೇ ವೇಳೆ ಖಾಸಗಿ ಆಸ್ಪತ್ರೆಗಳಲ್ಲಿ 38 ಶೇಕಡ ಸಿಸೇರಿಯನ್ ಹೆರಿಗೆಗಳು ನಡೆದಿತ್ತು. ರಾಜ್ಯಗಳ ಪೈಕಿ ತೆಲಂಗಾಣದಲ್ಲಿ ಸಿಸೇರಿಯನ್ ಹೆರಿಗೆಗಳು ಅತ್ಯಧಿಕವಾಗಿದೆ. ಒಟ್ಟು ಹೆರಿಗೆಗಳ ಪೈಕಿ 54.0 9 ಶೇಕಡ ಸಿಸೇರಿಯನ್ ಹೆರಿಗೆಗಳು ನಡೆದಿವೆ. ಖಾಸಗಿ ಆಸ್ಪತ್ರೆಗಳ ಪೈಕಿ ಅಂಡಮಾನ್ ಮತ್ತು ನಿಕೋಬಾರ್ ನಲ್ಲಿ ಅತ್ಯಧಿಕ ಸಿಸೇರಿಯನ್ ಹೆರಿಗೆ ಗಳಾಗುತ್ತಿದ್ದು ಅಲ್ಲಿ 95.45 ಶೇಕಡ ಸಿಸೇರಿಯನ್ ಹೆರಿಗೆಗಳಾಗುತ್ತಿವೆ. ಎರಡನೇ ಸ್ಥಾನ 93.7 ಶೇಕಡದೊಂದಿಗೆ ತ್ರಿಪುರಕ್ಕೆ ಸಿಕ್ಕಿದೆ.