ರಾಷ್ಟ್ರೀಯ ಪಕ್ಷಗಳಲ್ಲಿ ಹೆಚ್ಚು ಆದಾಯ ಬಿಜೆಪಿಗೆ; 2ನೇ ಸ್ಥಾನದಲ್ಲಿ ಟಿಎಂಸಿ

0
184

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಜ.18: ದೇಶದಲ್ಲಿ ರಾಷ್ಟ್ರೀಯ ಪಕ್ಷಗಳಲ್ಲಿ ಅತ್ಯಂತ ಹೆಚ್ಚು ಅದಾಯವನ್ನು ಬಿಜೆಪಿ ಗಳಿಸಿಕೊಂಡಿದ್ದು 2021-22ನೆ ವರ್ಷದಲ್ಲಿ ಬಿಜೆಪಿಯು ಅತ್ಯಂತ ಹೆಚ್ಚು ಹಣವನ್ನು ಸಂಪಾದಿಸಿಕೊಂಡಿದೆ. ಬಿಜೆಪಿಗೆ 2020-21ರಲ್ಲಿ 752 ಕೋಟಿ ರೂಪಾಯಿ ಆದಾಯ ಇತ್ತು. ಕಳೆದ ವರ್ಷ ಆದಾಯ 545.7 ಕೋಟಿ ರೂಪಾಯಿಗೇರಿಕೆಯಾಗಿದೆ.

ಆದಾಯದಲ್ಲಿ ಶೇ. 633 ಹೆಚ್ಚಳವಾಗಿದೆ. ಆದಾಯದಲ್ಲಿ ಬಿಜೆಪಿಯ ಹತ್ತಿರದಲ್ಲಿ ತೃಣಮೂಲ ಕಾಂಗ್ರೆಸ್ ಇದೆ. 2021-22ರಲ್ಲಿ ಅತೀ ಹೆಚ್ಚು ಹಣ ಖರ್ಚು ಮಾಡಿದ್ದು ಬಿಜೆಪಿಯಾಗಿದೆ. 854.46 ಕೋಟಿ ರೂಪಾಯಿ. ಎರಡನೇ ಸ್ಥಾನದಲ್ಲಿ ಕಾಂಗ್ರೆಸ್ ಇದೆ. ಅದು 400 ಕೋಟಿ ರೂಪಾಯಿ ಖರ್ಚು ಮಾಡಿತು. ತೃಣಮೂಲ ಕಾಂಗ್ರೆಸ್ 268.3 ಕೋಟಿ ರೂಪಾಯಿ ಖರ್ಚು ಮಾಡಿತು. ಸಿಪಿಎಂ 83.41 ಕೋಟಿ ರೂಪಾಯಿ ಮತ್ತು ಸಿಪಿಐ 1.2 ಕೋಟಿ ರೂಪಾಯಿ ಖರ್ಚು ಮಾಡಿದೆ.

ಕಳೆದ ವರ್ಷ ಚುನಾವಣೆಗೆ ಅತ್ಯಂತ ಹೆಚ್ಚು ಹಣವನ್ನು ಬಿಜೆಪಿ ವ್ಯಯಿಸಿದೆ. 2021-22ರ ಬಿಜೆಪಿಯು ಚುನಾವಣೆಗೆ ಅತೀ ಹೆಚ್ಚು 645.8 ಕೋಟಿ ರೂಪಾಯಿ ಖರ್ಚು ಮಾಡಿತು. ಕಾಂಗ್ರೆಸ್ 279.7 ಕೋಟಿ ರೂಪಾಯಿ ಚುನಾವಣೆಗೆ ಬಳಸಿಕೊಂಡಿತು. ಮತ್ತು ತೃಣಮೂಲ ಕಾಂಗ್ರೆಸ್ ಟಿಎಂಸಿ 135 ಕೋಟಿ ರೂಪಾಯಿ ಖರ್ಚು ಮಾಡಿದೆ. ಸಿಪಿಎಂ 13 ಕೋಟಿ ರೂಪಾಯಿ ಚುನಾವಣೆಗೆ ಬಳಸಿದೆ. ಪ್ರಾದೇಶಿಕ ಪಕ್ಷಗಳ ಪಟ್ಟಿಯಲ್ಲಿ 2021-22ರಲ್ಲಿ ಅತೀ ಹೆಚ್ಚು ಆದಾಯ ತಮಿಳ್ನಾಡಿನ ಆಡಳಿತ ಪಕ್ಷ ಡಿಎಂಕೆಗೆ ಸಿಕ್ಕಿತು. ಅದು 318.7 ಕೋಟಿ ರೂಪಾಯಿ ಗಳಿಸಿದರೆ. ಒಡಿಸ್ಸದ ಬಿಜೆಡಿಗೆ 307.4 ಕೋಟಿ ರೂಪಾಯಿ ಸಿಕ್ಕಿದೆ. ಟಿಆರ್‍ಎಸ್‍ಗೆ 279.4ಕೋಟಿ ರೂಪಾಯಿ ಆದಾಯ ಸಿಕ್ಕಿದೆ. ಆಂದ್ರ ಪ್ರದೇಶದಲ್ಲಿ ಸರಕಾರ ನಡೆಸುತ್ತಿರುವ ವೈಎಸ್‍ಆರ್ ಕಾಂಗ್ರೆಸ್ 93.7 ಕೋಟಿ ಆದಾಯದೊಂದಿಗೆ ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯ ಗಳಿಕೆಯಲ್ಲಿ ನಾಲ್ಕನೆ ಸ್ಥಾನವನ್ನು ಪಡೆದುಕೊಂಡಿದೆ.