ಇಸ್ರೇಲಿನ ಯೋಧನ ಹತ್ಯೆ ಪ್ರಕರಣ: 40 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಮಾಹಿರ್ ಬಿಡುಗಡೆ

0
209

ಸನ್ಮಾರ್ಗ ವಾರ್ತೆ

ಇಸ್ರೇಲಿ ಯೋಧನನ್ನು ಹತ್ಯೆಗೈದ ಅಪರಾಧಕ್ಕಾಗಿ 40 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಅರಬ್ ಮೂಲದ ಇಸ್ರೇಲಿ ವ್ಯಕ್ತಿ ಮಾಹಿರ್ ಯೂನಿಸ್ ಅವರ ಬಿಡುಗಡೆಯಾಗಿದೆ. 1983 ರಲ್ಲಿ ಇವರಿಗೆ ಮರಣದಂಡನೆ ವಿಧಿಸಲಾಗಿತ್ತು. ಆ ಬಳಿಕ ಈ ಮರಣದಂಡನೆಯನ್ನು 40 ವರ್ಷಗಳ ಶಿಕ್ಷೆಯಾಗಿ ಬದಲಿಸಲಾಗಿತ್ತು.

1980 ರಲ್ಲಿ ನಡೆಸಿದ ಹತ್ಯೆಗಾಗಿ ಸಹೋದರನನ್ನು ಕೂಡ ಇದೇ ಅಪರಾಧಕ್ಕಾಗಿ ಈತನ ಜೊತೆಗೆ ಜೈಲಿನಲ್ಲಿ ಇರಿಸಲಾಗಿತ್ತು ಮತ್ತು ಕಳೆದ ವಾರ ಆತ ಬಿಡುಗಡೆಯಾಗಿದ್ದ. ಫೆಲೆಸ್ತೀನಿಯರು ಇವರಿಬ್ಬರ ಬಿಡುಗಡೆಯನ್ನು ಸಡಗರದಿಂದ ಸ್ವಾಗತಿಸಿದ್ದಾರೆ. ಇದೇ ವೇಳೆ ಇವರ ಬಿಡುಗಡೆಯನ್ನು ಸಂಭ್ರಮಿಸುವುದರ ವಿರುದ್ಧ ಇಸ್ರೇಲಿ ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ. ಯೂನಿಸ್ ರವರು ಇಸ್ರೇಲ್ ನಲ್ಲಿದ್ದು ಅರಬ್ ಅಲ್ಪಸಂಖ್ಯಾತ ಸಮುದಾಯದವರಾಗಿದ್ದಾರೆ. ಸಾಮಾನ್ಯವಾಗಿ ಇವರನ್ನು ಫೆಲೆಸ್ತೀನಿಯರು ಎಂದು ಗುರುತಿಸಲಾಗುತ್ತದೆ.