ಡಾ. ಕಾಪು ಮುಹಮ್ಮದ್ ಝಾಂಬಿಯಾದ ಲಂಡನ್ ಅಮೇರಿಕನ್ ಯುನಿವರ್ಸಿಟಿ ಕಾಲೇಜಿನ ಉಪಕುಲಪತಿಯಾಗಿ ಆಯ್ಕೆ

0
525

ಸನ್ಮಾರ್ಗ ವಾರ್ತೆ

ಲುಸಾಕಾ (ಝಾಂಬಿಯಾ): ಇಲ್ಲಿನ ಲಂಡನ್ ಅಮೇರಿಕನ್ ಯುನಿವರ್ಸಿಟಿ ಕಾಲೇಜಿನ ಉಪ ಕುಲಪತಿಯಾಗಿ ಡಾ. ಕಾಪು ಮುಹಮ್ಮದ್ ರವರು ನೇಮಕಗೊಂಡಿದ್ದಾರೆ. ಕಾಲೇಜಿನ ಗವರ್ನರ್‌ಗಳ ಮಂಡಳಿಯು ಈ ಆಯ್ಕೆ ಮಾಡಿದೆ. ಲುಸಾಕಾದಲ್ಲಿರುವ ಈ ಪ್ರತಿಷ್ಟಿತ ಕಾಲೇಜು ದೇಶದ ಉನ್ನತ ಶಿಕ್ಷಣ ಪ್ರಾಧಿಕಾರದಿಂದ ಮಾನ್ಯತೆ ಪಡೆದಿರುತ್ತದೆ. ಈ ಕಾಲೇಜು  ಅಂತಾರಾಷ್ಟ್ರೀಯ  ಮಾನ್ಯತೆ ಪಡೆಯಲು ಶ್ರಮಿಸುತ್ತಿದೆ.
ಪ್ರೊಫೆಸರ್ ಕಾಪು ಮುಹಮ್ಮದ್ ಲಂಡನ್ ಅಮೇರಿಕನ್ ಸಿಟಿ ಕಾಲೇಜಿನ ಡೀನ್ ಮತ್ತು ಆಡಳಿತ ನಿರ್ದೇಶಕ ಹಾಗೂ ಅಮೇರಿಕದ ಮಿಶಿಗನ್ ನಲ್ಲಿರುವ ಮೆಡೋನಾ ಯುನಿವರ್ಸಿಟಿಯಜೆಂಕ್ಟ್ ಪ್ರೊಫೆಸರ್ ಕೂಡಾ ಆಗಿದ್ದಾರೆ. ಅಮೇರಿಕ, ಯುರೋಪ್ ಮತ್ತು ಭಾರತದಿಂದ ಕ್ರಮವಾಗಿ ಬಿಸಿನೆಸ್ ಅಡ್ಮಿಸ್ಟ್ರೇಷನ್, ಶಿಕ್ಷಣ ಮತ್ತು ಆಡಳಿತ ವಿಷಯಗಳಲ್ಲಿ ಡಾಕ್ಟರೇಟ್ ಪಡೆದಿರುತ್ತಾರೆ. ಅಮೇರಿಕನ್ ಯುರೋಪಿಯನ್ ಮತ್ತು ಭಾರತೀಯ ವಿವಿಗಳಲ್ಲಿ ಪಿಹೆಚ್‌ಡಿ ಎಕ್ಸಾಮಿನರ್ ಮತ್ತು ಗೈಡ್ ಕೂಡಾ ಆಗಿದ್ದಾರೆ. ಕಾಪು ಮುಹಮ್ಮದ್‌ರವರು ರಾಷ್ಟ್ರೀಯ ಅಂತಾರಾಷ್ಟ್ರೀಯ  ಅಡ್ಮಿಸ್ಟ್ರೇಷನ್ ಸಂಸ್ಥೆಗಳಿಂದ ಸುಮಾರು ಐವತ್ತಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿರುತ್ತಾರೆ.