ಎಪ್ರಿಲ್‍ನಲ್ಲಿ ಭಾರತಕ್ಕೆ 5ಜಿ ಸ್ಮಾರ್ಟ್‌ಫೋನ್‍ಗಳ ಲಗ್ಗೆ

0
1238

ಸಿಯೋಲ್,ಮಾ.7: ಬಹಳ ಕುತೂಹಲ ಕೆರಳಿಸಿರುವ 5 ಜಿ ಪ್ರೀಮಿಯಂ ಸ್ಮಾರ್ಟ್‍ಫೋನ್‍ಗಳು ಎಪ್ರಿಲ್‍ನಲ್ಲಿ ಭಾರತಕ್ಕೆ ಪ್ರವೇಶಿಸಲಿದ್ದು ಟೆಸ್ಟ್ ರನ್‍ನಲ್ಲಾದ ವಿಳಂಬ, ಪಾಟ್ರ್ಸ್‌ಗಳ ಅಡಚಣೆಗಳಿಂದಾಗಿ 5ಜಿ ಫೋನ್‍ಗಳ ವಿಳಂಬಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಪ್ರಮುಖ ಸ್ಮಾರ್ಟ್‌ ಫೋನ್ ತಯಾರಿಕಾ ಕಂಪೆನಿ ಸಾಮ್ ಸಂಗ್ ಇಲೆಕ್ಟ್ರಾನಿಕ್ಸ್ ಹೊರತಂದ ಎಸ್10 ಫೋನ್‍ನ 5ಜಿ ಮುಂದಿನ ತಿಂಗಳ ಮೊದಲ ವಾರದಲ್ಲಿ ಹೊರಬರಲಿದೆ. ಇದರೊಂದಿಗೆ ಎಲ್‍ಜಿಯ ವಿ50 ಮತ್ತು 5ಜಿ ಫೋನ್ ಮುಂದಿನ ತಿಂಗಳು ಮಾರುಕಟ್ಟೆಗೆ ಬರಲಿದೆ.

ಕಳೆದ ತಿಂಗಳು ಗ್ಯಾಲಕ್ಸಿ ಎಸ್10 ಸ್ಮಾರ್ಟ್ ಫೋನ್‍ನ್ನು ಸಾಮ್ ಸಂಗ್ ಹೊರತಂದಿತ್ತು. ಈ ಕಂಪೆನಿಯಲ್ಲದೆ ಚೀನದ ಕಂಪೆನಿಗಳಾದ ವನ್‍ಪ್ಲಸ್, ವಿವೊ, ಓಪೊ, ಶವೋಮಿ ಮೊದಲಾದ 5ಜಿ ಸ್ಮಾರ್ಟ್ ಫೋನ್ ಹೊರತಲಿವೆ.

4ಜಿಗಿಂತ ವೇಗದಲ್ಲಿ ಇಂಟರ್‌ನೆಟ್ 5ಜಿಯಲ್ಲಿ ದೊರೆಯಲಿದೆ. ಸೆಕೆಂಡಿಗೆ ಒಂದು ಗಿಗಬೈಟ್‍ಗಿಂತ ಹೆಚ್ಚು ವೇಗದಲ್ಲಿ ಇಂಟರ್‍ನೆಟ್ ಲಭ್ಯವಾಗಲಿದೆ. ಇದಲ್ಲದೆ, ಸ್ಪೀಡ್ ಕಡಿಮೆಯಾಗದೆ ಒಂದಕ್ಕಿಂತ ಹೆಚ್ಚು ಡಿವೈಸ್‍ಗಳು ಏಕ ಸಮಯದಲ್ಲಿ ಕನೆಕ್ಟ್ ಮಾಡಲು ಸಾಧ್ಯವಿರುವುದು 5ಜಿಯ ವಿಶೇಷತೆಯಾಗಿದೆ.