ಭಾರತದ ಮೇಲೆ ದಾಳಿ ನಡೆಸಲು ಜೈಷೆ ಮುಹಮ್ಮದ್‍ನ್ನು ಪಾಕಿಸ್ತಾನ ಇಂಟೆಲಿಜೆನ್ಸ್ ಈ ಹಿಂದೆಯೂ ಉಪಯೋಗಿಸಿಕೊಂಡಿದೆ- ಪಾಕ್ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್‌

0
489

ಇಸ್ಲಾಮಾಬಾದ್: ಪುಲ್ವಾಮದ ಭಯೋತ್ಪಾದನಾ ದಾಳಿ ನಡೆಸಿದ ಜೈಷೆ ಮುಹಮ್ಮದ್ ಭಯೋತ್ಪಾದನಾ ಸಂಘಟನೆಯಾಗಿದೆ. ಭಾರತದಲ್ಲಿ ದಾಳಿ ನಡೆಸಲು ಪಾಕಿಸ್ತಾನದ ಇಂಟಲಿಜೆನ್ಸ್ ಜೈಷೆಯನ್ನು ಉಪಯೋಗಿಸುತ್ತಿತ್ತು ಎಂದು ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಝ್ ಮುಶರ್ರಫ್ ಹೇಳಿದ್ದಾರೆ. ಹಮ್ ನ್ಯೂಸ್‍ಗಾಗಿ ಪಾಕಿಸ್ತಾನದ ಪತ್ರಕರ್ತ ನದೀಂ ಮಾಲಿಕ್‍ರಿಗೆ ಟೆಲಿಫೋನ್ ಸಂದರ್ಶನದಲ್ಲಿ ಈ ವಿವರ ಬಹಿರಂಗ ಪಡಿಸಿದ್ದಾರೆ.

ತಾನು ಅಧಿಕಾರದಲ್ಲಿದ್ದ ಕಾಲದಲ್ಲಿ ಪಾಕಿಸ್ತಾನದ ಇಂಟಲಿಜೆನ್ಸ್ ಜೈಷೆಯನ್ನು ಉಪಯೋಗಿಸಿತ್ತು. 2003ರಲ್ಲಿ ತನ್ನ ವಿರುದ್ಧ ಎರಡು ಸಲ ಜೈಷೆ ಹತ್ಯೆ ಯತ್ನ ನಡೆಸಿದೆ ಎಂದೂ ಮುಶರ್ರಫ್ ಚ್ಯಾನೆಲ್‍ಗೆ ತಿಳಿಸಿದ್ದಾರೆ. ಜೈಷೆ ಮುಹಮ್ಮದ್ ವಿರುದ್ಧ ಪಾಕಿಸ್ತಾನ ಕೈಗೊಂಡ ಕ್ರಮ ಸ್ವಾಗತಾರ್ಹವಾಗಿದೆ. ತಾನು ಅಧಿಕಾರದಲ್ಲಿದ್ದಾಗ ಜೈಷೆಯ ವಿರುದ್ಧ ಹೆಚ್ಚಿನ ಕ್ರಮ ಜರಗಿಸಲು ಸಾಧ್ಯವಾಗಿರಲಿಲ್ಲ. ಆಗ ಇಂದಿಗಿಂತ ಭಿನ್ನ ಪರಿಸ್ಥಿತಿಯಿತ್ತು. ಜೈಷೆಯ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ತಾನು ನಿರ್ಬಂಧಿತನಾಗಿರಲಿಲ್ಲ ಎಂದು ಮುಶರ್ರಫ್ ಹೇಳಿದ್ದಾರೆ.

‘ಪೂಲ್ವಾಮ ಭಯೋತ್ಪಾದನಾ ದಾಳಿಯ ಹೊಣೆಯನ್ನು ಜೈಷೆ ಮುಹಮ್ಮದ್ ವಹಿಸಿಕೊಂಡಿತ್ತು. ಆದರೆ ಇದು ಪಾಕಿಸ್ತಾನದಲ್ಲಿ ಅಲ್ಲ. ಪಾಕಿಸ್ತಾನ ನಿಷೇಧ ಹೇರಿದ ಸಂಘಟನೆಯಾಗಿದೆ ಎಂದು ಕಳೆದ ದಿವಸ ಇಂಟರ್ ಸರ್ವಿಸ್ ಪಬ್ಲಿಕ್ ರಿಲೇಶನ್ಸ್ ಡೈರೆಕ್ಟರ್ ಜನರಲ್ ಆಸಿಫ್ ಗಫೂರ್ ಹೇಳಿದ್ದರು’. ಈ ಹಿನ್ನೆಲೆಯಲ್ಲಿ ಪಾಕ್ ಇಂಟೆಲಿಜೆನ್ಸ್ ಜೈಷೆಯನ್ನು ಉಪಯೋಗಿಸಿದೆ ಎನ್ನುವ ವಿವರವನ್ನು ಮುಶರ್ರಫ್ ಬಹಿರಂಗಪಡಿಸಿದ್ದಾರೆ.

ಪೂಲ್ವಾಮ ದಾಳಿ ಸಹಿತ ಭಾರತದ ನಡೆದ ಹಲವು ಭಯೋತ್ಪಾದನಾ ದಾಳಿಯಲ್ಲಿ ಪಾಲ್ಗೊಂಡಿರುವ ಜೈಷೆ ಮುಹಮ್ಮದ್ ಮುಖ್ಯಸ್ಥ ಮಸೂದ್ ಅಝರ್ ಪಾಕಿಸ್ತಾನದಲ್ಲಿದ್ದಾನೆ.