ಅಕ್ರಮ ಸಾಗಾಟ : ಮಂಗಳೂರು ವಿಮಾನ ನಿಲ್ದಾಣದಲ್ಲಿ ₹2.60 ಕೋಟಿ ಮೌಲ್ಯದ ವಜ್ರ ವಶಕ್ಕೆ

0
561

ಸನ್ಮಾರ್ಗ ವಾರ್ತೆ

ಮಂಗಳೂರು : ವಿಮಾನದ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಜ್ರವನ್ನು ಮಂಗಳೂರು ಏರ್ ಪೋರ್ಟ್ ನ ಡಿಆರ್‌ಐ ಅಧಿಕಾರಿಗಳ ತಂಡ ವಶಕ್ಕೆ ಪಡೆದುಕೊಂಡಿದೆ.

ದುಬೈನಿಂದ ಪ್ರಯಾಣ ಬೆಳೆಸಿದ್ದ ಅನಸ್ ಮತ್ತು ಅಮ್ಮಾರ್ ಎಂಬವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದರು. ತಪಾಸಣೆಯ ವೇಳೆ ಈ ಇಬ್ಬರು ಪ್ರಯಾಣಿಕರಲ್ಲಿ 2.60 ಕೋಟಿ ರೂಪಾಯಿ ಮೊತ್ತದ ವಜ್ರ ಇರುವುದು ಕಂಡು ಬಂದಿವೆ. ಕೂಡಲೇ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳ ತಂಡ, ವಜ್ರವನ್ನು ವಶಕ್ಕೆ ಪಡೆದುಕೊಂಡಿದೆ ಎಂದು ತಿಳಿದುಬಂದಿದೆ. ಇಬ್ಬರನ್ನು ವಿಚಾರಣೆ ನಡೆಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.