ಸನ್ಮಾರ್ಗ ವಾರ್ತೆ
ಚೆನ್ನೈ, ಜೂ.14: ಮಾಜಿ ಮುಖ್ಯಮಂತ್ರಿ ಜಯಲಲಿತಾರ ವಿರುದ್ಧ ಟೀಕೆಯ ರೀತಿಯಲ್ಲಿ ತಮಿಳ್ನಾಡಿನ ಬಿಜೆಪಿ ಅಧ್ಯಕ್ಷ ಮಾತಾಡಿದ್ದು ವಿವಾದ ಸೃಷ್ಟಿಸಿದೆ.
ಅಣ್ಣಾಮಲೈ ವಿರುದ್ಧ ಮಿತ್ರ ಪಕ್ಷ ಎಐಡಿಎಂಕೆ ಪ್ರತಿಭಟನೆ ತೀವ್ರಗೊಳಿಸಿದೆ. ದಿವಂಗತ ಜಯಲಲಿತಾ ಎಐಡಿಎಂಕೆ ಅಧಿನಾಯಕಿ ಆಗಿದ್ದವರು. ಅಣ್ಣಾಮಲೈಯದ್ದು ಬೇಜವಾಬ್ದಾರಿ ಹೇಳಿಕೆ, ರಾಜಕೀಯ ಜ್ಞಾನ ಇಲ್ಲದ ಹೇಳಿಕೆ ಎಂದು ಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿ ಸ್ವಾಮಿ ಹೇಳಿದರು.
ಅಣ್ಣಾಮಲೈ ವಿರುದ್ಧ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿಗಳು ಪ್ರಸ್ತಾವ ತಂದಿದ್ದಾರೆ ಎಂದು ಪಳನಿ ಸ್ವಾಮಿ ತಿಳಿಸಿದ್ದು ಕ್ರಾಂತಿ ನಾಯಕ ಇದಯ ದೈವ ಅರ್ಥಾತ್ ಹೃದಯ ದೇವತೆ ಜಯ ಲಲಿತಾರ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಅಣ್ಣಾಮಲೈ ಮಾಡಿದ್ದಾರೆ ಎಂದು ಪ್ರಸ್ತಾವದಲ್ಲಿ ಹೇಳಲಾಗಿದೆ.
ಜಯಲಲಿತಾ ಕುರಿತು ಅಣ್ಣಾ ಮಲೈ ಹೀಗೆ ಹೇಳಿದ್ದಾರೆ: 1991ರಿಂದ 96ರವರೆಗೆ ತಮಿಳ್ನಾಡಿನಲ್ಲಿ ಅತ್ಯಂತ ಹೆಚ್ಚು ಭ್ರಷ್ಟಾಚಾರ ನಡೆದಿತ್ತು. ಅದು ಜಯ ಲಲಿತಾರ ಆಡಳಿತದ ಕಾಲವಾಗಿದೆ. ಜಯಲಲಿತರಿಂದಾಗಿ ತಮಿಳ್ನಾಡನ್ನು ದೊಡ್ಡ ಭ್ರಷ್ಟಚಾರದ ರಾಜ್ಯ ಎಂದು ಕರೆಯುತ್ತಾರೆ ಎಂದು ಆರೋಪಿಸಿದ್ದಾರೆ.
2011-15 ಜಯಲಲಿತಾರ ಕಾಲದಲ್ಲಿ ಸಾರಿಗೆ ಸಚಿವರಾಗಿದ್ದ ಸೆಂಥಿಲ್ ರನ್ನು ಮೆಟ್ರೋ ಟ್ರಾನ್ಸ್ ಪೋರ್ಟ್ ಕಾರ್ಪೊರೇಷನ್ ನೇಮಕಾತಿಯಲ್ಲಿ ಲಂಚ ಪಡೆದಿದ್ದ ಪ್ರಕರಣದಲ್ಲಿ ಬಂಧಿಸಲಾಗಿದೆ.
ನಂತರ ಅವರು ಎಐಡಿಎಂಕೆ ಬಿಟ್ಟು ಡಿಎಂಕೆಗೆ ಸೇರ್ಪಡೆಯಾಗಿದ್ದರು. ನಂತರ ಇವರ ವಿರುದ್ಧ ಇಡಿ, ಪೊಲೀಸ್ ತನಿಖೆಗೆ ಸುಪ್ರೀಂಕೋರ್ಟಿನಿಂದ ಅನುಮತಿ ಪಡೆಯಲಾಗಿತ್ತು. ಕಳೆದ ತಿಂಗಳು ಆದಾಯ ತೆರಿಗೆ ಅಧಿಕಾರಿಗಳು ಸೆಂಥಿಲ್ ನಿಕಟವರ್ತಿಗಳ ಮನೆಗಳಿಗೆ ದಾಳಿ ಮಾಡಿತ್ತು ಎಂದವರು ಹೇಳಿದ್ದಾರೆ












