ಪಠ್ಯ ಪುಸ್ತಕದಿಂದ ಹೆಡಗೇವಾರ್, ಸೂಲಿಬೆಲೆ ಔಟ್: ಅಂಬೇಡ್ಕರ್, ನೆಹರು ಇನ್

0
459

ಸನ್ಮಾರ್ಗ ವಾರ್ತೆ

ಹೆಡಗೇವಾರ್, ಸಾವರ್ಕರ್ ಸಾವರ್ಕರ್ ಮತ್ತು ಚಕ್ರವರ್ತಿ ಸೂಲಿಬೆಲೆಯವರಿಗೆ ಸಂಬಂಧಿಸಿದ ಪಠ್ಯವನ್ನು ಪಠ್ಯ ಪುಸ್ತಕದಿಂದ ಕಿತ್ತು ಹಾಕಲಾಗಿದೆ ಎಂದು ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಇವರ ಬದಲಾಗಿ ಸಾವಿತ್ರಿ ಬಾಯಿ ಪುಲೆ ಡಾ. ಬಿ. ಆರ್ ಅಂಬೇಡ್ಕರ್ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರ ಪಠ್ಯವನ್ನು ಸೇರಿಸಲಾಗಿದೆ ಎಂದು ಕೂಡ ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಸದ್ಯ ಪಠ್ಯ ಪುಸ್ತಕಗಳು ಆಯಾ ಶಾಲಾ ಮಕ್ಕಳಿಗೆ ತಲುಪಿದೆ. ಅಲ್ಲದೆ ಇದಕ್ಕೆ ಈಗಾಗಲೇ ನೂರಾರು ಕೋಟಿ ರೂಪಾಯಿಯನ್ನು ವೆಚ್ಚ ಮಾಡಲಾಗಿದೆ.. ಆದ್ದರಿಂದ ಮತ್ತೊಮ್ಮೆ ಪ್ರೀಂಟ್ ಮಾಡುವುದು ಕಷ್ಟ. ಪರಿಷ್ಕರಣೆ ವೇಳೆ ಮಕ್ಕಳಿಗೆ ಅವಶ್ಯಕತೆ ಇಲ್ಲದ ಹಾಗೂ ತಪ್ಪು ತಿಳುವಳಿಕೆ ಮೂಡಿಸುವ ವಿಚಾರಗಳನ್ನು ತೆಗೆಯಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಹಿಂದೆ ಸಾವಿತ್ರಿ ಬಾಯಿ ಫುಲೆ ಅವರ ವಿಷಯವನ್ನು ತೆಗೆಯಲಾಗಿತ್ತು. ಅದನ್ನು ಮರಳಿ ಸೇರಿಸಲಾಗಿದೆ. ಅಂಬೇಡ್ಕರ್ ಅವರ ಬಗೆಗಿನ ಕವಿತೆ ಮತ್ತು ಮಗಳಿಗೆ ಪತ್ರ ಎಂಬ ನೆಹರು ಅವರ ಬರಹವನ್ನು ಕೂಡ ಸೇರಿಸಲಾಗಿದೆ.

ಹಿಂದಿನ ಪಠ್ಯ ಪರಿಷ್ಕರಣೆಯಲ್ಲಿ ಸೇರಿಸಲಾಗಿದ್ದ ಪದಗಳು ವಾಕ್ಯಗಳ ಬದಲಾವಣೆ ಹಾಗೂ ಪಠ್ಯ ಬಗ್ಗೆ ಬದಲಾವಣೆ ಅಗತ್ಯ ಇತ್ತು. ಹೀಗಾಗಿ ಈ ಬಾರಿ 6 ರಿಂದ 10ನೇ ತರಗತಿಯವರೆಗೆ ಸಪ್ಲಿಮೆಂಟರಿ ಪುಸ್ತಕ ಕೊಡುವ ಬಗ್ಗೆ ಸಂಪುಟ ಒಪ್ಪಿಗೆ ನೀಡಿದೆ ಎಂದವರು ತಿಳಿಸಿದ್ದಾರೆ.