ಬಿಜೆಪಿ ಭಾರತವನ್ನು ವಿಭಜಿಸುತ್ತಿದೆ; ಆದರೆ ಕಾಂಗ್ರೆಸ್ ಜೋಡಿಸುತ್ತದೆ – ರಾಹುಲ್ ಗಾಂಧಿ

0
250

ಸನ್ಮಾರ್ಗ ವಾರ್ತೆ

ಪಟ್ನಾ, ಜೂ.23: ದೇಶದಲ್ಲಿ ಕಾಂಗ್ರೆಸ್ ಮತ್ತು ಆರೆಸ್ಸೆಸ್, ಬಿಜೆಪಿಯ ನಡುವೆ ಸೈದ್ಧಾಂತಿಕ ಯುದ್ಧ ನಡೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಬಿಹಾರದ ಕಾಂಗ್ರೆಸ್ ಕಚೇರಿಯಲ್ಲಿ ಅವರು ಕಾರ್ಯಕರ್ತರನ್ನುದ್ದೇಶಿಸಿ ಮಾತಾಡುತ್ತಿದ್ದರು. ಬಿಜೆಪಿ ದೇಶವನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಆದರೆ ಕಾಂಗ್ರೆಸ್‍ನ ಗುರಿ ಒಗ್ಗಟ್ಟು ಆಗಿದೆ ಎಂದು ಅವರು ಹೇಳಿದರು.

ದೇಶದಲ್ಲಿ ಒಂದು ಸೈದ್ಧಾಂತಿಕ ಯುದ್ಧ ನಡೆಯುತ್ತಿದೆ. ಅದರ ಒಂದು ಕಡೆ ಕಾಂಗ್ರೆಸ್‍ನ ಭಾರತ್ ಜೋಡೊ ಇದೆ. ಇನ್ನೊಂದು ಕಡೆ ಬಿಜೆಪಿಯ ಭಾರತ್ ತೋಡೊ ಇದೆ. ಬಿಜೆಪಿ ದೇಶದಲ್ಲಿ ದ್ವೇಷ ಅಕ್ರಮಗಳನ್ನು ಪ್ರಚೋದಿಸಿ ದೇಶವನ್ನು ನಾಶಪಡಿಸಲು ಶ್ರಮಿಸುತ್ತಿದೆ. ಆದರೆ ಎಲ್ಲರನ್ನೂ ಒಟ್ಟಿಗೆ ಕರೆದು ಕೊಂಡು ಹೋಗಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ರಾಹುಲ್ ಗಾಂಧಿ ಹೇಳಿದರು.

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‍ಗಡ, ರಾಜಸ್ಥಾನದಲ್ಲಿ ನಾವು ಗೆಲ್ಲಲಿದ್ದೇವೆ. ಬಿಜೆಪಿ ಕ್ರಮೇಣ ಇಲ್ಲದಾಗುತ್ತದೆ ಎಂದು ಅವರು ಭವಿಷ್ಯ ನುಡಿದರು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.