ಶಿವಸೇನೆಯ ಹೆಸರು, ಚಿಹ್ನೆ ವಿಚಾರ; ಉದ್ಧವ್ ಠಾಕ್ರೆ ಅರ್ಜಿ ಜುಲೈ 31ಕ್ಕೆ ವಿಚಾರಣೆ

0
294

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜು.10: ಶಿಂಧೆ ಬಣಕ್ಕೆ ಶಿವಸೇನೆಯ ಹೆಸರು ಚಿಹ್ನೆಯನ್ನು ನೀಡಿರುವ ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸಲ್ಲಿಸಿದ ಅರ್ಜಿಯ ವಿಚಾರಣೆ ಜುಲೈ 31ಕ್ಕೆ ನಡೆಯಲಿದೆ. ಈ ಕುರಿತು ಚೀಫ್ ಜಸ್ಟಿಸ್ ಡಿವೈ ಚಂದ್ರ ಚೂಡ್, ಜಸ್ಟಿಸ್ ಪಿಎಸ್ ನರಸಿಂಹರ ಪೀಠ ಆದೇಶವನ್ನು ನೀಡಿದೆ.

ಶಿವಸೇನೆ ಕಳೆದ ವರ್ಷ ಹೋಳಾಗಿತ್ತು. ನಿಜವಾದ ಶಿವಸೇನೆ ತಮ್ಮದೆಂದು ಶಿಂಧೆ ಬಣ ಹೇಳಿಕೊಂಡಿತು. ಫೆಬ್ರವರಿಯಲ್ಲಿ ಏಕನಾಥ ಶಿಂಧೆ ಬಣಕ್ಕೆ ಅಧಿಕೃತ ಶಿವಸೇನೆಯ ಮಾನ್ಯತೆ ಚುನಾವಣೆ ಆಯೋಗ ನೀಡಿದೆ. ತದನಂತರ ಶಿವಸೇನೆಯ ಚುನಾವಣಾ ಚಿಹ್ನೆ ಬಿಲ್ಲು ಬಾಣ ಶಿಂಧೆ ಶಿವಸೇನೆ ವಶವಾಗಿದೆ.

ಶಿವಸೇನೆ ಉದ್ಧವ್ ಬಾಳ ಸಾಹೇಬ್ ಠಾಕ್ರೆ ಎಂಬ ಹೆಸರನ್ನು ಉದ್ಧವ್ ಠಾಕ್ರೆ ಬಣಕ್ಕೆ ಶಿವಸೇನೆ ಕೊಟ್ಟಿತ್ತು. ಪಾರ್ಟಿ ಚಿಹ್ನೆಯ ಕುರಿತು ಎರಡು ಬಣಗಳು ಹಕ್ಕುವಾದವನ್ನು ಎತ್ತಿದ್ದವು. ಶಿಂಧೆ ಬಣ ಅವರೇ ಪಾರ್ಟಿಯಿಂದ ಹೊರಹೋಗಿದ್ದು ಅವರಿಗೆ ಪಾರ್ಟಿ ಚಿಹ್ನೆಯಲ್ಲಿ ಹಕ್ಕು ಮಂಡಿಸಲು ಆಗುವುದಿಲ್ಲ ಎಂದು ಠಾಕ್ರೆ ಚುನಾವಣಾ ಆಯೋಗಕ್ಕೆ ಹೇಳಿದ್ದರು. ಆದರೂ ಇದನ್ನು ತಿರಸ್ಕರಿಸಿ ಶಿವಸೇನೆಯ ಹೆಸರು ಚಿಹ್ನೆಯನ್ನು ಶಿಂಧೆ ಬಣಕ್ಕೆ ಚುನಾವಣಾ ಆಯೋಗ ಕೊಟ್ಟಿದೆ. ಇದನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಕೋರ್ಟಿನ ಮೊರೆ ಹೋಗಿದ್ದರು.