ಪಾಂಡೇಶ್ವರ: ಉದ್ದೇಶಿತ ಪಾರ್ಕ್ ಆವರಣದ ಸುತ್ತ ಹಣ್ಣಿನ ಗಿಡನೆಟ್ಟ ನಾಗರಿಕರು

0
420

ಸನ್ಮಾರ್ಗ ವಾರ್ತೆ

ಕಂಟೋನ್ಮೆಂಟ್ ವಾರ್ಡ್ (46) ಸಮಿತಿಯಿಂದ ಪಾಂಡೇಶ್ವರದ ರೈಲೈ ಹಳಿ‌ ಕ್ರಾಸಿಂಗ್ ಬಳಿಯ ದೂಮಪ್ಪ ಕೌಂಪೌಂಡ್ ನಲ್ಲಿ ಉದ್ದೇಶಿತ ಸಾರ್ವಜನಿಕ ಪಾರ್ಕ್ ಆವರಣದ ಸುತ್ತ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ದಿನಾಂಕ 9.07.23 ರಂದು ವಾರ್ಡ್ ಕಾರ್ಪೊರೇಟರ್ ಹಾಗೂ ಮಾಜಿ ಮೇಯರ್ ‌ರಾದ ಶ್ರೀ. ದಿವಾಕರ್ ಪಾಂಡೇಶ್ವರ ರವರು ಉದ್ಗಾಟಿಸಿದರು.

ಉದ್ಧೇಶಿತ ಪಾರ್ಕ್ ಪಾಂಡೇಶ್ವರ ರೈಲೈ ಹಳಿ ಪಕ್ಕ ಟಿ.ವಿ.ಎಸ್ ಶೋರೂಂ ಹಿಂಬದಿ 80 Cents ಸ್ಥಳದಲ್ಲಿದ್ದು ಅದನ್ನು ಮಕ್ಕಳಿಗೆ ಹಾಗೂ ಯುವ ಜನರಿಗೆ ಆಟವಾಡಲು, ಹಿರಿಯ ನಾಗರಿಕರಿಗೆ ನಡೆಯಲು ವಾಕಿಂಗ್ ಟ್ರ್ಯಾಕ್ , ಮತ್ತು ವ್ಯಾಯಾಮ ಉಪಕರಣಗಳಿಂದ ಸುಸಜ್ಜಿತ ಗೊಳಿಸುವ ಉದ್ದೇಶದಿಂದ ಅದಕ್ಕಾಗಿ ಮೂಡಾದಿಂದ ಅಂದಾಜು ಒಂದು ಕೋಟಿ ರೂಪಾಯಿ ಅನುದಾನ ಕಳೆದ ಸಾಲಿನಲ್ಲಿ ಅನುಮೋದನೆಯಾಗಿರುತ್ತದೆ ಎಂದು ಮಾಜಿ ಮೇಯರ್ ತಿಳಿಸಿದ್ದಾರೆ.

ಈ ಪಾರ್ಕಿನ ಮೇಲುಸ್ತುವಾರಿಯನ್ನು ಸ್ಥಳೀಯ ಸಮಿತಿ ಮೂಲಕ ನಿರ್ವಹಣೆ ಮಾಡಲಾಗುವುದು. ಈ ನಿರ್ವಹಣಾ ಸಮಿತಿಯಲ್ಲಿ ಕಂಟೋನ್ಮೆಂಟ್‌ನ(46)ವಾರ್ಡ್‌ ಸಮಿತಿ ಸದಸ್ಯರು ಹಾಗೂ ಇತರ ಸ್ಥಳೀಯ ನಾಗರೀಕರ ಸಹಬಾಗಿತ್ವದೊಂದಿಗೆ ರಚಿಸಲಾಗುವುದು ಎಂದು ವಾರ್ಡ್‌ ಕಾರ್ಪೊರೇಟರ್, ಶ್ರಿ. ದಿವಾಕರ ಪಾಂಡೇಶ್ವರವರು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ವಾರ್ಡ್ ಸಮಿತಿಯ ಸದಸ್ಯರುಗಳಾದ ; ಶಹನಾಜ್, ಗ್ಲಾಡಿಯಸ್, ಪದ್ಮನಾಭ, ಉಮೇಶ್ ರಾವ್ ಕುಂಬಳೆ, ಕಿಶೋರ್ ಅತ್ತಾವರ್, ಸಮಿತಿ ಕಾರ್ಯದರ್ಶಿ, ಜೇನುಕಲ್ಲು, ಹಾಗೂ ಸ್ಥಳೀಯರ ನಾಗರಿಕರು ಬಾಗವಹಿಸಿದ್ದರು.