ಮಣಿಪುರದಲ್ಲಿ ಕಾಂಗ್ರೆಸ್ ನಾಯಕರ ಮೂಲಕ ಹಿಂಸೆಗೆ ಯತ್ನಿಸುತ್ತಿದೆ- ಅನುರಾಗ್ ಠಾಕೂರ್

0
423

ಸನ್ಮಾರ್ಗ ವಾರ್ತೆ

ಹೊಸದಿಲಿ, ಜು.17: ಕಾಂಗ್ರೆಸ್‌ ಮಣಿಪುರಕ್ಕೆ ನಾಯಕರನ್ನು ಕಳುಹಿಸಿ ಹಿಂಸಾಚಾರಕ್ಕೆ ಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದರು. ಶಾಂತಿ ಅಲ್ಲಿ ನೆಲೆಯೂರುವಂತೆ ಮಾಡಲು ಕೆಲವು ಪಾರ್ಟಿಗಳು ಬಯಸಿಲ್ಲ. ಕೆಲವು ದಿವಸಗಳಿಂದ ಸಮಸ್ಯೆ ಇಲ್ಲದಿದ್ದ ಅಲ್ಲಿಗೆ ನಾಯಕರನ್ನು ಕಳುಹಿಸಿ ಸಮಸ್ಯೆಯನ್ನು ಬಿಗಡಾಯಿಸುವುದು ಪಾರ್ಟಿಗಳ ಉದ್ದೇಶವಾಗಿದೆ ಎಂದು ಠಾಕೂರ್ ಹೇಳಿದರು.

ಕಳೆದ ಹತ್ತು ದಿವಸಗಳಿಂದ ಮಣಿಪುರದಲ್ಲಿ ಅಹಿತಕರ ಘಟನೆಗಳ ವರದಿಯಾಗಿಲ್ಲ. ಆದರೆ ನಾಯಕರು ಅಲ್ಲಿಗೆ ಕಳುಹಿಸಿ ಅನಗತ್ಯ ಸಮಸ್ಯೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು  ಅನುರಾಗ್ ಠಾಕೂರ್ ಹೇಳಿದರು.

ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರಕಾರ ನೆರೆ ಬಾಧಿತ ಸಮಯದಲ್ಲಿಯೂ ಯಾವೊಬ್ಬ ಪ್ರಜೆಗೂ ಶಾಂತವಾಗಿ ಬದುಕಲು ಬಿಡಲಿಲ್ಲ ಎಂದು ಅವರು ಹೇಳಿದರು.

ತನ್ನ ಕ್ಷೇತ್ರ ಹಮಿರ್ ಪುರದಲ್ಲಿ ಅನುರಾಗ್ ಠಾಕೂರ್  ನಾಲ್ಕು ದಿವಸಗಳ ಭೇಟಿಯಲ್ಲಿದ್ದಾರೆ. ಹಿಮಾಚಲ ಪ್ರದೇಶದ ಜನರ ಸಹಾಯಕ್ಕೆ ಕೇಂದ್ರ ಸರಕಾರ ಬದ್ಧವಾಗಿದ್ದು ಮೋದಿ ಹಿಮಾಚಲ ಪ್ರದೇಶಕ್ಕೆ ಮೋದಿ ವಿಶೇಷ ಗಮನ ಕೊಡುವ ವ್ಯಕ್ತಿ ಎಂದು ಠಾಕೂರ್ ಹೇಳಿದರು. ಎಲ್ಲ ಸಚಿವರಿಗೂ ರಾಜ್ಯದ ಜನರಿಗೆ ಬೇಕಾದ ಸಹಾಯ ಹಸ್ತವನ್ನು ನೀಡುವಂತೆ  ಪ್ರಧಾನಿ ಸೂಚಿಸಿದ್ದರು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.