ಸನ್ಮಾರ್ಗ ವಾರ್ತೆ
ಚೆನ್ನೈ, ಜು.17: ತಮಿಳ್ನಾಡಿನ ಉನ್ನತ ಶಿಕ್ಷಣ ಸಚಿವ ಕೆ. ಪೊನ್ಮುಡಿಯವರ ಮನೆಗೆ ಇಡಿ ದಾಳಿ ಮಾಡಿದೆ. ಸೋಮವಾರ ಬೆಳಗ್ಗಿನ ಘಟನೆ ಇದು. ಸಚಿವರ ಚೆನ್ನೈಯ ವಿಲ್ಲುಪುಂರನ ಮನೆ ಸಹಿತ ಇಡಿ ದಾಳಿ ಶುರುವಾಗಿದೆ.
ಸಚಿವರು, ಸಚಿವರ ಪುತ್ರ ಸಂಸದ ಗೌತಂ ಸಿಂಗಮಣಿಗೆ ಸೇರಿದ ಒಂಬತ್ತು ಸ್ಥಳಗಳಿಗೆ ಇಡಿ ನುಗ್ಗಿದೆ. ಏಳು ಮಂದಿ ತಂಡದಿಂದ ದಾಳಿ ಶುರುವಾಗಿದ್ದು ಪ್ರತಿಪಕ್ಷ ಪಾರ್ಟಿಯ ಜಂಟಿ ಸಭೆಗೆ ಮುಖ್ಯಮಂತ್ರಿ ಸ್ಟಾಲಿನ್ ಬೆಂಗಳೂರಿಗೆ ಹೋಗುತ್ತಿರುವ ದಿವಸ ಇಡಿ ದಾಳಿ ಮಾಡಿದ್ದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಈ ಮೊದಲು 2020ರಲ್ಲಿ ಪೊನ್ಮುಡಿ ಮತ್ತು ಮಗ ಸಂಸದ ಗೌತಂ ಸಿಂಗಮಣಿಯ ವಿರುದ್ಧ ಇಡಿ ದಾಳಿ ಮಾಡಿತ್ತು. ಈ ಸಂದರ್ಭದಲ್ಲಿ 8.6 ಕೋಟಿ ರೂಪಾಯಿ ಆಸ್ತಿ ವಶಪಡಿಸಿಕೊಂಡಿತ್ತು.
ತಮಿಳ್ನಾಡು ವಿದ್ಯುತ್- ಅಬಕಾರಿ ಸಚಿವ ಸೆಂತಿಲ್ ಬಾಲಾಜಿಯ ಮನೆಯಲ್ಲಿ ಇಡಿ ದಾಳಿ ನಡೆಸಿ ಬಂಧಿಸಿತ್ತು. ಇದಾಗಿ ವಾರಗಳಲ್ಲಿ ಇನ್ನೊಬ್ಬ ಸಚಿವರ ಮನೆಗೆ ಇಡಿ ದಾಳಿ ನಡೆಸಿದೆ. ಜಯಲಲಿತಾ ಸರಕಾರದಲ್ಲಿ ಸಚಿವರಾಗಿದ್ದ ಸೆಂತಿಲ್ ವಿರುದ್ಧ ಕೆಲಸ ಕೊಡಿಸಲು ಲಂಚ ಕೇಳಿದ ಆರೋಪವನ್ನು ಇಡಿ ಹೊರಿಸಿ ಬಂಧಿಸಿತ್ತು. ಇದನ್ನು ಬಲವಾಗಿ ಮುಖ್ಯಮಂತ್ರಿ ಸ್ಟಾಲಿನ್ ವಿರೋಧಿಸಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದರು.












