“ಇಂಡಿಪೆಂಡೆನ್ಸ್ ” ಕಪ್; ಶಾಲಾ, ಕಾಲೇಜು ಮಟ್ಟದ ಫುಟ್ಬಾಲ್ ಪಂದ್ಯಾಟ, ಜುಲೈ 22 ರಿಂದ ಆರಂಭ

0
300

ಸನ್ಮಾರ್ಗ ವಾರ್ತೆ

ದ.ಕ.ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್ ವತಿಯಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಜುಲೈ 22 ರಿಂದ ಫುಟ್ಬಾಲ್ ಪಂದ್ಯಾಟವನ್ನು ಆಯೋಜಿಸಲಾಗಿದೆ.

ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ದ.ಕ ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌ನ ಅಧ್ಯಕ್ಷರಾದ ಡಿ ಎಂ ಅಸ್ಲಮ್ ಸ್ವಾತಂತ್ರ್ಯ ದಿನಾಚರಣೆಯ ಸವಿನೆನಪಿಗಾಗಿ 25 ವರ್ಷಗಳ ಹಿಂದೆ ಶಾಲಾ ಕಾಲೇಜು ಮಟ್ಟದ ಫುಟ್ಬಾಲ್‌ ಪಂದ್ಯಾಟ ದಿ|ಪಳ್ಳಿ ಜಯರಾಮ ಶೆಟ್ಟಿಯವರ ಪ್ರೇರಣೆಯಿಂದ “ಇಂಡಿಪೆಂಡೆನ್ಸ್‌” ಕಪ್‌ ಪಂದ್ಯಾವಳಿಯನ್ನು ಪ್ರಾರಂಭಿಸಲಾಯಿತು.

ಕೋವಿಡ್‌ ನಂತರ ಇದೀಗ ಮೊದಲ ಪಂದ್ಯಾಟ ಜುಲೈ 22ರಂದು ಮಂಗಳೂರಿನ ನೆಹರೂ ಫುಟ್ಬಾಲ್‌ ಗ್ರೌಂಡ್‌ನಲ್ಲಿ ನಡೆಯಲಿದೆ ಸುಮಾರು 210ಕ್ಕೂ ಮಿಕ್ಕಿದ ತಂಡಗಳು ಭಾಗವಹಿಸುತ್ತಿರುವುದಾಗಿ ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಫುಟ್‌ಬಾಲ್‌ ಅಸೋಸಿಯೇಶನ್‌ನ ಉಪಾಧ್ಯಕ್ಷ ಬಿ.ಬಿ ಥೋಮಸ್‌, ಕಾರ್ಯದರ್ಶಿ ಹುಸೈನ್‌ ಬೋಳಾರ್‌, ಖಜಾಂಚಿ ಫಿರೋಝ್‌ ಉಳ್ಳಾಲ್‌ ಉಪಸ್ಥಿತರಿದ್ದರು.