ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಜು.19: ಬೆಂಗಳೂರಿನಲ್ಲಿ ಐವರು ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಇವರಲ್ಲಿ ಪಿಸ್ತೂಲ್, ಗುಂಡು, ವಿಸ್ಫೋಟಕ ವಸ್ತುಗಳಿದ್ದವು ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
ಬಂಧಿತರಲ್ಲಿ ಟಿ. ನಝೀರ್ 2008ರ ಸರಣಿ ಬಾಂಬು ಸ್ಫೋಟದ ಆರೋಪಿಯಾಗಿದ್ದು, ಲಶ್ಕರೆ ತಯ್ಯಿಬ ಉಗ್ರ ಸಂಘಟನೆಯವನು ಎನ್ನಲಾಗಿದ್ದು, ಐವರು ಶಂಕಿತ ಆರೋಪಿಗಳಿಂದ ಏಳು ಪಿಸ್ತೂಲು, 45 ಗುಂಡುಗಳು ವಾಕಿ ಟಾಕಿ, ಕೆಲವು ಚಾಕುಗಳು ಮತ್ತು ಹನ್ನೆರಡು ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ ಇವರು ನಗರದಲ್ಲಿ ಬಹುದೊಡ್ಡ ಸ್ಫೋಟಕ್ಕೆ ಸಂಚು ಹೆಣೆಯುತ್ತಿದ್ದರು. ಸುಲ್ತಾನ್ ಪಾಳ್ಯದ ಕನಕನಗರದಿಂದ ಪೊಲೀಸರು ಈ ಕಾರ್ಯಾಚರಣೆ ಮಾಡಿದರು.












