ಮದ್ಯಪಾನಿ ಮಗಳನ್ನು ಭಾರತಕ್ಕೆ ಕಳುಹಿಸಲು ಸಜ್ಜಾದ ಹೆತ್ತವರು!- ವೈರಲ್ ವಿಡಿಯೋ

0
947

ಅಮೆರಿಕ: ಭಾರತೀಯ ಹೆತ್ತವರು ಮಕ್ಕಳ ಭವಿಷ್ಯದ ಕುರಿತು ಹೆಚ್ಚು ಚಿಂತಿತರಾಗುತ್ತಾರೆ. ಅಮೆರಿಕದಲ್ಲಿದ್ದರೂ ಭಾರತದ ಗುಣದಲ್ಲಿ ಯಾವುದೇ ಬದಲಾವಣೆಯಾಗದಂತೆ ನೋಡಿಕೊಳ್ಳುತ್ತಿದ್ದಾರೆ.ಮಗಳ ಅತಿಯಾದ ಮದ್ಯಪಾನ ಸೇವನೆಯಿಂದ ಬೇಸತ್ತು, ಆಕೆಯನ್ನು ತಾಯ್ನಾಡಿಗೆ ಕಳುಹಿಸಲು ಮುಂದಾದ ಹೆತ್ತವರ ಕುರಿತು ಆಕೆಯೇ ಟ್ವಿಟ್ಟರ್ ನಲ್ಲಿ ಹೇಲಿಕೊಂಡಿದ್ದಾಳೆ. ವಿಪರೀತ ಮದ್ಯಪಾನಿಯಾಗಿ ಮಾರ್ಪಾಟಾಗಿರುವ ಮಿಷಾ ಮಲಿಕ್ ಎಂಬ ಯುವತಿ “ಹೆತ್ತವರು ನನ್ನನ್ನು ಊರಿಗೆ ಕಳುಹಿಸಲು ತೀರ್ಮಾನಿಸಿದ ಕ್ಷಣ” ಎಂದು ಟಿಪ್ಪಣಿಯಲ್ಲಿ ಮದ್ಯ ಸೇವಿಸುತ್ತಾ ವೀಡಿಯೋ ಟ್ವೀಟ್ ಮಾಡಿದ್ದಾಳೆ.

ಅಮೆರಿಕದ ಓಹಿಯೊಂದಲ್ಲಿ ಮಿಷಾ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾಳೆ. ಹೆತ್ತವರ ಮುಂದೆಯೇ ವಿಪರೀತ ಮದ್ಯಪಾನ ಮಾಡುವ ಮಿಷಾಳನ್ನು ಊರಿಗೆ ಕಳುಹಿಸಲು ಅವರು ತೀರ್ಮಾನಿಸಿದ್ದಾರೆ ಎಂದು ಟ್ವೀಟ್ ಮಾಡಿ ಮದ್ಯಪಾನ ಮಾಡುವ ವೀಡಿಯೋವನ್ನು ಮಿಷಾ ಹಂಚಿಕೊಂಡಿದ್ದಾಳೆ. ಮಿಷಾ ನಿರಂತರ ಮದ್ಯಪಾನ ಮಾಡುವುದನ್ನು ತಾಯಿ ವಿರೋಧಿಸುವುದು ವೀಡಿಯೋದಲ್ಲಿ ಕಂಡು ಬರುತ್ತದೆ. ವೀಡಿಯೋಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಸಿಕ್ಕಿದೆ. ಹಲವರು ಟ್ವೀಟ್‍ನ ಕೆಳಗೆ ಕಾಮೆಂಟು ಮಾಡಿದ್ದಾರೆ. ವಿಮಾನ ಟಿಕೆಟು ತೆಗೆದರೂ ಕೆಮ್ಮು ಬಂದದ್ದರಿಂದ ತಾತ್ಕಾಲಿಕವಾಗಿ ಊರಿಗೆ ಮರಳದೆ ಪಾರಾಗಿದ್ದಾಳೆ. ವ್ಯಸನಿಯಾಗಿ ಮಾರ್ಪಟ್ಟ ಮಗಳನ್ನು ಸರಿಪಡಿಸಲು ಹೆತ್ತವರು ಮುಂದಾದರೂ ಇಂತಹ ಸನ್ನಿವೇಶಕ್ಕೆ ಗುರಿಯಾಗಬೇಕಾಗಿ ಬಂದಿದೆ