ವೇತನ ವಿಳಂಬ: ಜೆಟ್ ಏರ್‍ವೇಸ್‍ನ 260 ಪೈಲೆಟ್‍ಗಳು ಸ್ಪೈಸ್ ಜೆಟ್‍ಗೆ ಉದ್ಯೋಗಾಂತರ!

0
504

ಹೊಸದಿಲ್ಲಿ: ಸಂಬಳ ವಿಳಂಬದ ಕಾರಣದಿಂದ ಜೆಟ್ ಏರ್‍ವೇಸ್‍ನ 260 ಪೈಲೆಟ್‍ಗಳು ಖಾಸಗಿ ಕಂಪೆನಿ ಸ್ಪೈಸ್ ಜೆಟ್‍ಗೆ ಹೋಗಲು ನಿರ್ಧರಿಸಿದ್ದಾರೆ. ಇವರಲ್ಲಿ ಬೊಯಿಂಗ್ ವಿಮಾನಗಳನ್ನು ಹಾರಿಸುವ 150 ಹಿರಿಯ ಪೈಲೆಟ್‍ಗಳು ಸೇರಿದ್ದಾರೆ.

ಸಾಲದಿಂದ ಜರ್ಝರಿತವಾದ ಜೆಟ್‍ಏರ್‍ವೇಸ್‍ನ್ನು ರಕ್ಷಿಸಲು ಮುಂದೆ ಬರುವಂತೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‍ಗಳಿಗೆ ಕಳೆದ ಸರಕಾರ ಸೂಚಿಸಿತ್ತು. ಆದರೆ, ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಇದಕ್ಕೆ ಸರಿಯಾದ ಯೋಜನೆಯನ್ನು ರೂಪಿಸಲು ವಿಫಲವಾಗಿದೆ. ತದನಂತರ ಜೆಟ್ ವೇರ್‍ವೇಸ್ ಕಂಪೆನಿ ತೊರೆಯಲು ಪೈಲಟ್‍ಗಳು ನಿರ್ಧರಿಸಿದ್ದಾರೆನ್ನಲಾಗಿದೆ. ಜೆಟ್ ಏರ್‍ವೇಸ್‍ಗೆ ಈಗ 1900 ಪೈಲಟ್‍ಗಳಿದ್ದಾರೆ. ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಗುರಿಯಾದ ಈ ಕಂಪೆನಿ ತ್ಯಜಿಸಿ ದೇಶದೊಳಗೆ ಸರ್ವಿಸ್ ನಡೆಸುವ ಇತರ ವಿಮಾನ ಕಂಪೆನಿ ಸೇರಲು ಜೆಟ್‍ಏರ್‍ವೇಸ್ ಸಿಬ್ಬಂದಿಗಳು ಮುಂದಾಗಿದ್ದಾರೆ ಎಂದು ವರದಿಯಾಗಿದೆ.