ಹರಿಯಾಣದಲ್ಲಿ ಬುಲ್ಡೋಝಿಂಗ್‍ಗೆ ತಡೆಯಾಜ್ಞೆ

0
312

ಗುರುಗಾಂವ್, ಆ.7: ಹರಿಯಾಣದ ನೂಹ್‍ನಲ್ಲಿ ಬುಲ್ಡೋಝರ್ ನಿಂದ ಕಟ್ಟಡಗಳನ್ನು ಕೆಡುವುದನ್ನು ಹರಿಯಾಣ- ಪಂಜಾಬ್ ಹೈಕೋರ್ಟು ತಡೆ ನೀಡಿದೆ.

ನಾಲ್ಕು ದಿವಸಗಳಲ್ಲಿ ಕಟ್ಟಡ ನೆಲಸಮ ಮಾಡುವ ಕಾರ್ಯಗಳು  ನಡೆಯುತ್ತಿದ್ದು ಇದರ ವಿರುದ್ಧ ಸಲ್ಲಿಕೆಯಾದ ಅರ್ಜಿಯಲ್ಲಿ ಹೈಕೋರ್ಟು ಕ್ರಮಕೈಗೊಂಡಿದ್ದು   ರಾಜ್ಯ ಸರಕಾರ ಮತ್ತು ಪೊಲೀಸರಿಗೆ ನೋಟಿಸು ಜಾರಿ ಮಾಡಿದೆ.

ಯಾವುದೇ ನೋಟಿಸು ನೀಡದೆ ಕಟ್ಟಡ ನೆಲಸಮ ಕಾರ್ಯ ನಡೆಸಲಾಗುತ್ತಿದೆ ಎಂದು ಹೈಕೋರ್ಟಿನಲ್ಲಿ ಅರ್ಜಿದಾರರು ವಾದಿಸಿದರು.

ನೂಹ್‍ನಲ್ಲಿ ಕೋಮು ಘರ್ಷಣೆ ನಡೆದ ಬೆನ್ನಿಗೆ ಉತ್ತರಪ್ರದೇಶ ಮಾದರಿ ಬುಲ್ಡೋಝೀಂಗ್ ಕ್ರಮಗಳನ್ನು ಹರಿಯಾಣ ಸರಕಾರ ಆರಂಭಿಸಿತ್ತು.

ಅಲ್ಪಸಂಖ್ಯಾತರು ವಾಸಿಸುವ ಸ್ಥಳಗಳು ಅವರ ಅಂಗಡಿಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ಕಳೆದ ದಿವಸ ಮೂರು ಮಹಡಿಯ ಸಹಾರ ಹೊಟೇಲ್ ಸಹಿತ ಹದಿನಾರು ಸಂಸ್ಥೆಗಳನ್ನು ಕೆಡವಲಾಗಿತ್ತು. ಕಾನೂನು ಉಲ್ಲಂಘಿಸಿ ಕಟ್ಟಡ ಕಟ್ಟಿಸಲಾಗಿದೆ ಮತ್ತು ವಿಹಿಂಪ ಜಾಥಾಕ್ಕೆ ಕಲ್ಲೆಸೆದದ್ದು ಇಲ್ಲಿಂದ ಎಂದು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಅಶ್ವಿನಿಕುಮಾರ್ ಹೇಳಿದ್ದರು.

ಟೌರ್ ನಗರದ ಸರಕಾರಿ ಜಮೀನಲ್ಲಿ ವಾಸಿಸುತ್ತಿದ್ದ ಅಲ್ಪಸಂಖ್ಯಾತ ವಿಭಾಗದ 250ರಷ್ಟು ಗುಡಿಸಲುಗಳನ್ನು ಕೆಡವಲಾಗಿದೆ. ನಲ್ಹಾರ್ ಮೆಡಿಕಲ್ ಕಾಲೇಜಿನ ಸುತ್ತವಿರುವ 2.6 ಎಕರೆ ಜಮೀನಿನಲ್ಲಿ ಸಹಿತ 12 ಸ್ಥಳಗಳ ಕಟ್ಟಡಗಳನ್ನು ಜಿಲ್ಲಾಡಳಿತ ನೆಲಸಮ ಮಾಡಿತ್ತು.

ನಿನ್ನೆ ನೂಹ್‍ನಲ್ಲಿ ಕರ್ಫ್ಯೂ ಮೂರು ಗಂಟೆಗಳ ಕಾಲ ಸಡಿಲಿಕೆ ಇತ್ತು. ಆದರೆ ಇಂಟರ್‍ನೆಟ್ ಸೇವೆ ನಿಷೇಧವನ್ನು ನಾಳೆಯವರೆಗೆ ಮುಂದುವರಿಸಲಾಗಿದೆ.