ನಿರಾಮಯ ಆರೋಗ್ಯ ವಿಮಾ ಯೋಜನೆ: ವಿಶೇಷ ಚೇತನರು ತಿಳಿದಿರಲೇಬೇಕಾದ ವಿಷಯಗಳು

0
648

ಸನ್ಮಾರ್ಗ ವಾರ್ತೆ

ಭಾರತ ಸರ್ಕಾರದ ಅಂಗವಿಕಲರ ಸಬಲೀಕರಣ ಇಲಾಖೆ ಮತ್ತು ಸಾಮಾಜಿಕ ನ್ಯಾಯ ಇಲಾಖೆಯ- ನ್ಯಾಷನಲ್ ಟ್ರಸ್ಟ್ ವ್ಯಾಪ್ತಿಯಲ್ಲಿ ಬರುವ ಸ್ವಲೀನತೆ (ಆಟಿಸಂ) ಮೆದುಳುವಾತ (ಸೆರಬ್ರಲ್ ಪಾಲ್ಸಿ) ಬೌದ್ಧಿಕ ವಿಕಲತೆ (ಇಂಟೆಲೆಕ್ಚುವಲ್ ಡಿಸೆಬಿಲಿಟಿ) ಮತ್ತು ಬಹುವಿಧ (ಮಲ್ಟಿಪಲ್ ಡಿಸೆಬಿಲಿಟಿ) ಅಂಗವೈಕಲ್ಯತೆ ಮತ್ತು ಈ ಅಂಗವೈಕಲ್ಯತೆಗಳ ಬಗ್ಗೆ ಅಧೀಕೃತ ಪ್ರಮಾಣ ಪತ್ರ ಇರುವ ಎಲ್ಲಾ ವಯಸ್ಸಿನ ಅಂಗವಿಕಲರಿಗೆ ನಿರಾಮಯ ಆರೋಗ್ಯ ವಿಮಾ ಯೋಜನೆಯು ಅನ್ವಯಿಸುತ್ತದೆ.

ಫಲಾನುಭವಿಗಳು 1ಲಕ್ಷ ರೂಪಾಯಿವರೆಗೂ ಥೆರಪಿ, ಹೊರ ರೋಗಿ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ವೈದ್ಯಕೀಯ ಮುಂತಾದ ವೆಚ್ಚಗಳನ್ನು ಮರುಪಾವತಿ ವಿಧಾನದ ಮೂಲಕ ಪಡೆಯಬಹುದು.

ನಿರಾಮಯ ಆರೋಗ್ಯ ವಿಮೆಯ ಪ್ರಯೋಜನಗಳು:

• ಶಸ್ತ್ರ ಚಿಕಿತ್ಸೆಗೆ ರೂ 40,000/-ವರೆಗೆ
• ಶಸ್ತ್ರಚಿಕಿತ್ಸೆರಹಿತ ವೈದ್ಯಕೀಯ ವೆಚ್ಚ ರೂ 15,000/- ವರೆಗೆ
• ಹೊರ ರೋಗಿ ಚಿಕಿತ್ಸೆ- ವೈದ್ಯಕೀಯ ತಪಾಸಣೆ ಮತ್ತು ಪರೀಕ್ಷೆ, ಔಷಧಿಗಳು, ಪೆಥಾಲಜಿ ರೂ 15,000/- ವರೆಗೆ
• ಹಲ್ಲಿನ ತಪಾಸಣೆ ಮತ್ತು ವೈದ್ಯಕೀಯ ವೆಚ್ಚ ರೂ 4,000/- ವರೆಗೆ
• ಥೆರಪಿ ರೂ 20,000/- ವರೆಗೆ
• ಪರ್ಯಾಯ ಔಷಧಿಗಳು ರೂ 4,000/-ವರೆಗೆ
• ಪ್ರಯಾಣ ಭತ್ಯೆ ರೂ 2,000/- ವರೆಗೆ
ಯಾವುದೇ ನೊಂದಾಯಿತ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯಬಹುದು.

ವಿಶೇಷ ಸೂಚನೆ: ನಿರಾಮಯ ವಿಮೆಯ ಕಾರ್ಡು ಸಕ್ರಿಯಗೊಂಡ ದಿನದಿಂದ ಮುಂದಿನ ಹಣಕಾಸಿನ ವರ್ಷದ ಮಾರ್ಚ್ 31ರ ವರೆಗೆ ಚಾಲ್ತಿಯಲ್ಲಿರುತ್ತದೆ. ಪ್ರತಿ ವರ್ಷ ಇದನ್ನು ನವೀಕರಿಸಬೇಕು.

ನಿರಾಮಯ ಆರೋಗ್ಯ ವಿಮೆಯ ಕಾರ್ಡನ್ನು ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು:

• ವಿಳಾಸದ ಪುರಾವೆಗಾಗಿ ಫಲಾನುಭವಿಯ ಸ್ಕ್ಯಾನ್ ಮಾಡಲಾದ ಆಧಾರ್ ಕಾರ್ಡ್ ಹಾಗೂ ಪೋಷಕರ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ. PDF ಫೈಲ್.

• ಫಲಾನುಭವಿಯ ಸ್ಕ್ಯಾನ್ ಮಾಡಲಾದ ಅಂಗವೈಕಲ್ಯದ ಪ್ರಮಾಣ ಪತ್ರ/ಯು.ಡಿ.ಐ.ಡಿ PDF ಫೈಲ್.

• ಫಲಾನುಭವಿಯ ರಾಷ್ಟ್ರೀಕೃತ ಬ್ಯಾಂಕಿನ ಪಾಸ್ ಪುಸ್ತಕ 19 ವಯಸ್ಸಿನ ಒಳಗಿನವರಿಗೆ ಪೋಷಕರ ಜೊತೆ ಫಲಾನುಭವಿಯ ಜಂಟೀ ಖಾತೆ.

• ಫಲಾನುಭವಿಯ ಸ್ಕ್ಯಾನ್ ಮಾಡಲಾದ ಬಿ.ಪಿ.ಎಲ್ ರೇಷನ್ ಕಾರ್ಡ್ PDF ಫೈಲ್.

• ಫಲಾನುಭವಿಯ ಸ್ಕ್ಯಾನ್ ಮಾಡಲಾದ ಜನನ ಪ್ರಮಾಣ ಪತ್ರ PDF ಫೈಲ್.

• ಫಲಾನುಭವಿಯ ಇತ್ತೀಚಿನ ಪಾಸ್ ಪೊಟೊ ಅಳತೆಯ ಭಾವಚಿತ್ರ PDF ಫೈಲ್.

ಮೊದಲ ಬಾರಿ ಬಿ.ಪಿ.ಎಲ್ ಫಲಾನುಭವಿಯು ರೂ. 250/- ಹಾಗೂ ಮೊದಲ ಬಾರಿ ಎ.ಪಿ.ಎಲ್ ಫಲಾನುಭವಿಯ ರೂ.500/- ಪಾವತಿಸಬೇಕು. ನಿರಾಮಯ ನವೀಕರಣ ಮಾಡಲು ಕಾರ್ಡನ ಜೆರಾಕ್ಸ್ ಪ್ರತಿಯೊಂದಿಗೆ ಬಿ.ಪಿ.ಎಲ್ ಫಲಾನುಭವಿಯು ರೂ. 50/- ಪಾವತಿಸಬೇಕು. ನಿರಾಮಯ ನವೀಕರಣ ಮಾಡಲು ಕಾರ್ಡನ ಜೆರಾಕ್ಸ್ ಪ್ರತಿಯೊಂದಿಗೆ ಎ.ಪಿ.ಎಲ್ ಫಲಾನುಭವಿಯು ರೂ. 250/- ಪಾವತಿಸಬೇಕು.

ನಿರಾಮಯ ಆರೋಗ್ಯ ವಿಮೆಯ ಮರುಪಾವತಿ:
ಹಣವನ್ನು ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳೊಂದಿಗೆ ಮರುಪಾವತಿಯ ನಮೂನೆಯನ್ನು ಭರ್ತಿ ಮಾಡಬೇಕು.

ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್ ಪ್ರತಿ,
ಅಂಗವೈಕಲ್ಯದ ಪ್ರಮಾಣ ಪತ್ರ/ಯು.ಡಿ.ಐ.ಡಿ ಜೆರಾಕ್ಸ್ ಪ್ರತಿ, ನಿರಾಮಯ ಕಾರ್ಡ್ ಜೆರಾಕ್ಸ್ ಪ್ರತಿ,
ವೈದ್ಯರು ನೀಡುವ ಔಷಧಿ ಚೀಟಿಗಳು
ಲ್ಯಾಬ್ ಪರೀಕ್ಷೆಯ ವರದಿಗಳು
ಅಸ್ಪತ್ರೆಯ ದಾಖಲಾದ ಮತ್ತು ಡಿಸ್‌ಚಾರ್ಜ್ ವರದಿ
ಅಂತಿಮ ಎಲ್ಲಾ ಮೂಲ ರಶೀದಿಗಳ ಇರಬೇಕು.
ರಶೀದಿಯಲ್ಲಿ ನಮೂದಿಸಲಾದ ದಿನಾಂಕದಿಂದ 10 ದಿನಗಳ ಒಳಗೆ ಎಲ್ಲಾ ರಸೀದಿಗಳನ್ನು ರಕ್ಷಾ ಟಿ.ಪಿ.ಎಗೆ ತಲುಪಿಸಬೇಕು. ಒಂದುವೇಳೆ 10 ದಿನಗಳ ಒಳಗೆ ತಲುಪದಿದ್ದರೆ ಹಣ ಮರುಪಾವತಿಯಾಗುವುದಿಲ್ಲ.

ರಸೀದಿಗೆ ಸಂಬಂಧಿಸಿದಂತೆ ಅನುಮಾನಗಳಿದ್ದಲ್ಲಿ ರಕ್ಷಾ ಟಿ.ಪಿ.ಎ ಕಡೆಯಿಂದ ನಿಮ್ಮ ನಿರಾಮಯ ವಿಮೆಯ ನೊಂದಾಯಿತ ಮೊಬೈಲ್ ನಂಬರ್‌ಗೆ ಎಸ್.ಎಂ.ಎಸ್ ಬರುತ್ತದೆ ಇದಕ್ಕೆ ಉತ್ತರಿಸಬೇಕು. ಇಲ್ಲವಾದಲ್ಲಿ ಹಣ ಮರುಪಾವತಿಯಾಗುವುದಿಲ್ಲ.

ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳನ್ನು ಪೋಸ್ಟ್/ಕೋರಿಯರ್ ಮೂಲಕ ಅಥವಾ ನೇರವಾಗಿ ಕಳುಹಿಸಬೇಕಾದ/ ತಲುಪಿಸಬೇಕಾದ ವಿಳಾಸ:

ರಕ್ಷಾ ಟಿ.ಪಿ.ಎ, ಹೆಲ್ತ್ ಇನ್ಸುರೇನ್ಸ್ ಲಿಮಿಟೆಡ್
ನಂ.೮, ಮೊದಲನೇ ಮಹಡಿ, ಖೈಕಾ ಕೋರ್ಟ್-2
ಹೊಸೂರು ರೋಡ್, 2ನೇ ಬ್ಲಾಕ್, ಕೋರಮಂಗಲ,
ಮಡಿವಾಳ ಬೆಂಗಳೂರು-560034
ದೂರವಾಣಿ ಸಂಖ್ಯೆ: 080-42839999
ಟೋಲ್‌ಪ್ರೀ ಸಂಖ್ಯೆ: 1800 4258910

ನಿರಾಮಯ ಕಾರ್ಡನ ನೋಂದಣಿಗಾಗಿ ಮತ್ತು ಮಾಹಿತಿಗಾಗಿ ಸಂಪರ್ಕಿಸಿರಿ:
ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾಷನಲ್ ಟ್ರಸ್ಟ್ ನೊಂದಾಯಿತ ಸಂಸ್ಥೆಗಳು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ

ರಾಜ್ಯ ನೋಡಲ್ ಸಂಸ್ಥೆ: ದಿ ಅಸೋಸಿಯೇಷನ್ ಆಫ್ ದಿ ಪೀಪಲ್ ವಿತ್ ಡಿಸೆಬಿಲಿಟಿ (ಎಪಿಡಿ)
ಫೋನ್: 08025475165