ಸನ್ಮಾರ್ಗ ವಾರ್ತೆ
ದಿನಾಂಕ 15-8-2023 ರಂದು ಹಿರಾ ಶಾಲೆ ಬಬ್ಬುಕಟ್ಟೆಯ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಶಾಂತಿ ಶಿಕ್ಷಣ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಜನಾಬ್ ಕೆ ಎಂ ಶರೀಫ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಮುಸ್ತಾಕ್ ಪಟ್ಲಾ ಕೌನ್ಸಿಲರ್ ಸಿಟಿ ಮುನ್ಸಿಪಲ್ ಕೌನ್ಸಿಲ್ ಉಳ್ಳಾಲ್ ಇವರು ಜಾತ್ಯತೀತ ದೇಶದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆ ಇರಬೇಕು. ಅದನ್ನು ಮಕ್ಕಳಲ್ಲಿ ಚಿಕ್ಕಂದಿನಲ್ಲಿಯೇ ಮೂಡಿಸಬೇಕು ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಶಾಂತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜನಾಬ್ ಎ ಎಚ್ ಮೆಹಮೂದ್, ಕಾರ್ಯದರ್ಶಿ ಜನಾಬ್ ಅಬ್ದುಲ್ ಕರೀಂ, ಶಾಲಾ ಸಂಚಾಲಕರಾದ ಜನಾಬ್ ಅಬ್ದುಲ್ ರಹಮಾನ್ ಮತ್ತು ಜನಾಬ್ ರೆಹಮತುಲ್ಲಾ, ಆಡಳಿತಾಧಿಕಾರಿ ಜನಾಬ್ ಝಾಕೀರ್ ಹುಸೇನ್, ಶಾಲಾ ಆಡಳಿತ ಮಂಡಳಿಯ ಸದಸ್ಯರು, ಶಾಲಾ ಮುಖ್ಯಸ್ಥರು, ರಕ್ಷಕ ಶಿಕ್ಷಕ ಸಂಘದ ಸದಸ್ಯರು, ಬೋಧಕ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಯರಾದ ಅಬ್ದುಲ್ ಯುಸಫ್ ರಫೀಕ ಸ್ವಾಗತಿಸಿ, ಖದೀಜ ನಸೀಹ ವಂದಿಸಿ, ಆಯಿಷಾ ಶಹಮ ಕಾರ್ಯಕ್ರಮ ನಿರೂಪಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.












