ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ನೆಹರೂ ಮ್ಯೂಸಿಯಂ ಹೆಸರು ಬದಲಿಸಿದುದನ್ನು ಹಿರಿಯ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಕಟುವಾಗಿ ಟೀಕಿಸಿದ್ದು ಪ್ರಧಾನಿಗೆ ಕಾಂಪ್ಲೆಕ್ಸ್ ಇದೆ. ನೆಹರೂರ ಸ್ಮರಣೆ ಮತ್ತು ಪ್ರಭಾವವು ತಲೆಮಾರುಗಳ ಮೂಲಕ ಮುಂದುವರಿಯಲಿದೆ ಎಂದು ಅವರು ಹೇಳಿದರು.
ಇಂದಿನಿಂದ ದೇಶದ ಐಕಾನ್ ಸಂಸ್ಥೆಯ ಹೆಸರು ಬದಲಿಸಲಾಗುತ್ತಿದೆ. ಜಗತ್ತಿನಾದ್ಯಂತ ಅರಿಯಲ್ಪಡುತ್ತಿರುವ ನೆಹರೂ ಮೆಮೊರಿಯಲ್ ಮ್ಯೂಸಿಯಂ ಆಂಡ್ ಲೈಬ್ರರಿ ಇನ್ನು ಮುಂದೆ ಪ್ರೈಂ ಮಿನಿಸ್ಟರ್ ಮೆಮೊರಿಯಲ್ ಮ್ಯೂಸಿಯಂ ಆಂಡ್ ಲೈಬ್ರರಿ ಆಗಲಿದೆ.
ಮೋದಿಯವರೊಳಗೆ ನೂರಾರು ಹೆದರಿಕೆಗಳಿವೆ. ಸಂಕೀರ್ಣತೆ ಮತ್ತು ಅಸುರಕ್ಷಿತತೆ ಕಾಡುತ್ತಿದೆ. ವಿಶೇಷವಾಗಿ ದೇಶದ ಪ್ರಥಮ ಪ್ರಧಾನಿಯ ಹಾಗೂ ಅತೀ ಹೆಚ್ಚು ಕಾಲ ಪ್ರಧಾನಿಯಾಗಿದ್ದ ಜವಹರಲಾಲ್ ನೆಹರೂರ ವಿಷಯ ಬರುವಾಗ ಮೋದಿ ನೆಹರೂರ ತತ್ವವನ್ನು ವಿರೋಧಿಸುತ್ತಾರೆ. ಅವರ ಪರಂಪರೆಗೆ ಮಸಿ ಬಳಿಯುತ್ತಿದ್ದಾರೆ. ನಿಷೇಧಾತ್ಮಕ, ತಿರುಚುವಿಕೆ ಎಂಬ ಅಜೆಂಡ ಮಾತ್ರ ಮೋದಿಗಿದೆ. ಅವರು ಎನ್ ತೆಗೆದು ಹಾಕಿ ಪಿಯನ್ನು ಉಳಿಸಿದ್ದಾರೆ. ಪಿ ಮೋದಿಯ ಕ್ಷುಲ್ಲಕ ಮನೋಭಾವವನ್ನು ತೋರಿಸಿಕೊಡುತ್ತಿದೆ. ಸಂಕಟವನ್ನೂ ವ್ಯಕ್ತಪಡಿಸುತ್ತಿದೆ.
ಮೋದಿ ಯಾವುದನ್ನೂ ಬದಲಿಸಿದರೂ ನೆಹರೂರು ದೇಶಕ್ಕೆ ಕೊಟ್ಟಿರುವ ಮಹತ್ತರ ಕೊಡುಗೆಗಳನ್ನು ಭಾರತ ಎಂಬ ದೇಶವನ್ನು ಕಟ್ಟಿ ಬೆಳೆಸಲು ಕಠಿಣ ಪರಿಶ್ರಮ ನಡೆಸಿದ್ದನ್ನು ಇಲ್ಲದಾಗಿಸಲು ಸಾಧ್ಯವಿಲ್ಲ. ಅವೆಲ್ಲವೂ ಮೋದಿಯನ್ನು ಅವರನ್ನು ಅನುಸರಿಸುವವರ ಮೇಲೆ ದಾಳಿಯಿಡುತ್ತಿವೆ. ಮುಂದಿನ ಪೀಳಿಗೆಯ ಮೂಲಕ ನೆಹರೂ ಪ್ರಶಂಸಿಸಲ್ಪಡಲಿದ್ದಾರೆ ಎಂದು ಜೈರಾಂ ರಮೇಶ್ ಹೇಳಿದರು.












