ನಿರಾಶ್ರಿತರ ಶಿಬಿರಕ್ಕೆ ಪುನಃ ಇಸ್ರೇಲ್ ದಾಳಿ; ಇಬ್ಬರ ಸಾವು

0
140

ಸನ್ಮಾರ್ಗ ವಾರ್ತೆ

ರಮಲ್ಲ: ವೆಸ್ಟ್ ಬ್ಯಾಂಕಿನ ಜೆರಿಕೊ ನಗರದ ನಿರಾಶ್ರಿತರ ಕ್ಯಾಂಪಿನ ಮೇಲೆ ಮಂಗಳವಾರ ಬೆಳಗ್ಗೆ ಇಸ್ರೇಲ್ ಸೈನಿಕರು ನುಗ್ಗಿದ್ದು ಈ ದಾಳಿಯ ವೇಳೆ ಇಬ್ಬರು ಫೆಲಸ್ತೀನಿರು ಕೊಲ್ಲಲ್ಪಟ್ಟಿದ್ದಾರೆ. ಎದೆಗೆ ಗುಂಡೇಟು ಬಿದ್ದಿದ್ದ ಇಬ್ಬರು ಯುವಕರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಜೆರಿಕೊ ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕುಸಯ್ಯ್ ಅಲ್‍ವಲಜಿ, ಮುಹಮ್ಮದ ನುಜುಂ ಅನ್ಯಾಯವಾಗಿ ಇಸ್ರೇಲ್ ಸೈನದಿಂದ ಹತ್ಯೆಯಾಗಿದ್ದಾರೆ. ಶಿಬಿರದಲ್ಲಿ ಇಸ್ರೇಲ್ ಸೈನಿಕರು ಒಂದು ಗಂಟೆಗಳ ಕಾಲ ದಾಳಿ ನಡೆಸಿದ್ದರು.

ವೆಸ್ಟ್ ಬ್ಯಾಂಕಿಗೆ ಸಮೀಪದಲ್ಲಿ ಇಸ್ರೇಲ್ ಸೇನೆ ನಿರಾಶ್ರಿತರ ಶಿಬಿರಗಳನ್ನು ಗುರಿಯಾಗಿಸುತ್ತಿರುವ ಘಟನೆಗಳಲ್ಲಿ ಹೆಚ್ಚಳವಾಗಿದೆ. ಈ ವರ್ಷ ಇದುವರೆಗೆ 216 ಫೆಸ್ತೀನಿಯರು  ಇಸ್ರೇಲ್ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ.